ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಗೆಲ್ಲಿಸಿ: ರಮ್ಯಾ

Rashmi Kasaragodu
Updated On : 6 Apr 2014, 1:29 am

ಶ್ರೀರಂಗಪಟ್ಟಣ: ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡಿ ಗೆಲುವಿಗೆ ಕಾರಣರಾದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಾವು ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಶನಿವಾರ ತಿಳಿಸಿದರು.
ಬೇಲೂರು ಮತ್ತಿತ್ತರ ಗ್ರಾಮಗಳಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ನಡೆದ ಗಲಾಟೆಗಳನ್ನು ಸಹಿಸಿಕೊಂಡು ರೋಡ್ ಶೋ ಸ್ಥಗಿತಗೊಳಿಸಿದ ನಂತರ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪಕ್ಕೆ ಆಗಮಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ರಮ್ಯಾ ಮಾತನಾಡಿದರು. ಸಂಸದರಾದ ನಂತರ ಅತಿ ಕಡಿಮೆ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಇನ್ನು ಮಾಡ ಬೇಕಾದ ಕೆಲಸ ಸಾಕಷ್ಟಿವೆ. ಈ ಅಭಿವೃದ್ಧಿಕೆಲಸಗಳನ್ನು ಮಾಡಲು ಹಾಗೂ ರೈತ ಪರ ಹೋರಾಟ ಮತ್ತು ಶೋಷಿತ ವರ್ಗದ ಮಹಿಳೆಯ ಹಿತಕ್ಕಾಗಿ ಸಂಸತ್ತಿನಲ್ಲಿ ದನಿಯೆತ್ತಲೂ ಮತ್ತೆ ತಮ್ಮನ್ನು ಚುನಾಯಿಸಿ ಸಂಸತ್ತಿಗೆ ಕಳುಹಿಸುವಂತೆ ರೈತ ಸಂಘದ ಕಾರ್ಯಕರ್ತರಲ್ಲಿ ಕೋರಿದರು.
ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಸಂಸತ್ನಲ್ಲಿ ಜಿಲ್ಲೆಯ ರೈತ ಮತ್ತು ಮಹಿಳೆಯರ ಪರ ರಮ್ಯಾ ದನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೆಡಿಎಸ್ ಭ್ರಷ್ಟಚಾರ ಮತ್ತು ಕುಟುಂಬ ರಾಜಕಾರಣ ಮಾಡುತ್ತಾ ಜನರನ್ನು ವಂಚಿಸುತ್ತಿರುವುದಾಗಿ ಆರೋಪಿಸಿದರು.
ರೈತ ಮುಖಂಡ ಕೆ.ಎಸ್. ನಂಜುಂಡೆಗೌಡ ಮಾತನಾಡಿ, ರಾಜ್ಯ ರೈತ ಸಂಘ ಮತ್ತು ರಾಜ್ಯ ಮತ್ತು ಜಿಲ್ಲೆಯ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷರ ಆದೇಶದಂತೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅರವನ್ನು ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಗಿದೆ. ರೈತ ಸಂಘದ ಕಾರ್ಯಕರ್ತರು ರಮ್ಯಾ ಅವರ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. ಪ್ರಕಾಶ್, ರಾಮಕೃಷ್ಣ, ಕೋಣಸಾಲೆ ನರಸರಾಜು. ಸುರೇಶ್, ಜಯರಾಂ, ಸ್ವಾಮಿಗೌಡ, ಪಾಂಡು, ಕೆಂಪೂಗೌಡ, ನಂಜುಂಡಪ್ಪ, ಕೆಂಪೇಗೌಡ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement