ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ
ಹಲಗೂರು: ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಗಳ ಪ್ರತಿ ಮನೆಗಳಿಗೂ ಭೇಟಿ ನೀಡಿ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ ಸಾಧನೆ ಮನವರಿಕೆ ಮಾಡಿ ಅಭ್ಯರ್ಥಿ ರಮ್ಯಾ ಪರ ಮತಯಾಚಿಸುವಂತೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.
ಶನಿವಾರ ಬೆಳಿಗ್ಗೆ ಶಾಸಕರು ಮತ್ತು ಕಾರ್ಯಕರ್ತರು ಮುತ್ತತ್ತಿಯ ಮುತ್ತತ್ತಿರಾಯನ ದೇವಸ್ಥಾನ ಹಾಗೂ ಬಸವನಬೆಟ್ಟದ ಮೇಲೆ ನೆಲ್ಲೆಸಿರುವ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಹಲಗೂರು ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರ ಜೊತೆ ಚರ್ಚಿಸಿ, ಮತಯಾಚಿಸಿದರು.ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಿ ಮತಯಾಚಿಸಿ ರಮ್ಯಾರವರನ್ನು ಗೆಲ್ಲಿಸುವಂತೆ ಮನವಿ ಮಾಡಿ, ಏ.13ರ ಬಾನುವಾರ ಅಭ್ಯರ್ಥಿ ರಮ್ಯಾ ಮತ್ತು ಮುಖಂಡರು ರೋಡ್ ಶೋ ಮುಖಾಂತರ ಮಾತಯಾಚಿಸಲು ಬರುತ್ತಾರೆ. ಕಾರ್ಯಕರ್ತರು ಪಕ್ಷಕ್ಕೆ ದುಡಿಯುವಂತೆ ಮನವಿ ಮಾಡಿದರು. ತಾಪಂ ಅಧ್ಯಕ್ಷ ಬಸವರಾಜು, ಬಿ.ಕೆ. ಪುಟ್ಟಸ್ವಾಮಿಗೌಡ, ಬಿ.ಕೆ. ಕೃಷ್ಣಪ್ಪ, ಎಚ್.ಐ ಷಂಶುದೀನ್, ಎಚ್.ಆರ್. ಪದ್ಮನಾಭ ಇತರರು ಇದ್ದರು.