ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ದೂರು ನೀಡಿದ ಪತ್ನಿ
ಕೆಜಿಎಫ್: ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ತನ್ನ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬೂಬಜಾರ್ ನಿವಾಸಿ ಚಂದ್ರಕುಮಾರ್ ಎಂಬುವರೊಂದಿಗೆ ದುರ್ಗಾದೇವಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 1.10 ಲಕ್ಷ ನಗದು ಸೇರಿದಂತೆ ಚಿನ್ನದ ಒಡವೆಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು. ಮದುವೆಯಾದ ಮೂರು ತಿಂಗಳ ನಂತರ ಪತಿ ಚಂದ್ರಕುಮಾರ್ ಹೀರೋ ಹೊಂಡಾ ದ್ವಿಚಕ್ರ ವಾಹನವನ್ನು ವರದಕ್ಷಿಣೆಯಾಗಿ ತರುವಂತೆ ಪತ್ನಿಗೆ ಆಗಾಗ ಪೀಡಿಸುತ್ತಿದ್ದ. ಅಲ್ಲದೆ, ದೈಹಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಆಕೆ ತನ್ನ ಪತಿ ವಿರುದ್ಧವೇ ಪೊಲೀಸರಿಗೆ ಇದೀಗ ದೂರು ನೀಡಿದ್ದಾಳೆ.