ಶ್ರೀರಾಮರೆಡ್ಡಿ ಮತಯಾಚನೆ
ಸೂಲಿಬೆಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ವರ್ಧಿಸಿರುವ ಎಚ್.ಡಿ ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿ ಎಂದು ಸಿಪಿಎಂ ಅಭ್ಯರ್ಥಿ ಶ್ರೀರಾಮರೆಡ್ಡಿ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ಜೆಡಿಎಸ್ ಅಂಗಡಿ ಖಾಲಿಯಾಗಿದ್ದರಿಂದ ಇದೀಗ ಚಿಕ್ಕಬಳ್ಳಾಪುರದಲ್ಲಿ ತನ್ನ ಅಂಗಡಿ ಇಡಲು ಬಂದಿದ್ದಾರೆ. ಈ ಅಂಗಡಿಯಲ್ಲಿ ವ್ಯಾಪಾರ ನಡೆಯೋಲ್ಲ. ಮತದಾರ ಅತ್ತ ತಿರುಗಿ ಕೂಡ ನೋಡಲ್ಲ. ಹಗರಣಗಳಿಂದ ಖ್ಯಾತಿಯನ್ನು ಹೊಂದಿದ್ದೇ ಯುಪಿಎ ಸಾಧನೆಯಾಗಿದೆ. ಕೋಮುವಾದಿತನ ಮೈಗೊಡಿಸಿಕೊಂಡಿರುವ ಬಿಜೆಪಿಯಿಂದ ಸದೃಢ ದೇಶ ನಿರ್ಮಾಣ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಹೊಸಕೋಟೆ ಮೂಲಕ ಸೂಲಿಬೆಲೆ, ನಂದಗುಡಿ ಹಾಗೂ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ರೋಡ್ ಶೋ ಮೂಲಕ ಶನಿವಾರ ಮತ ಯಾಚನೆ ಮಾಡಿದ ಶ್ರೀರಾಮರೆಡ್ಡಿ ಮೂರು ಪ್ರಮುಖ ರಾಜಕೀಯ ಪಕ್ಷಗಳನ್ನು ಟೀಕಿಸಿದರು.
ಹಿರಿಯ ಮುಖಂಡೆ ವಿಮಲಾ, ಹೊಸಕೋಟೆ ಹರೀಂದ್ರ ಮೊದಲಾದವರು ಹಾಜರಿದ್ದರು.