ಉಚಿತ ಬೇಸಿಗೆ ಕ್ರೀಡಾ ಶಿಬಿರ
ಕೋಲಾರ: ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಏ.11ರಿಂದ ಮೇ.8 ರವರೆಗೂ ಶಾಲಾ ಮಕ್ಕಳಿಗಾಗಿ ಆಟೋಟಗಳ ಬಗ್ಗೆ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ. ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಎಸ್. ಚೌಡಪ್ಪ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಈ ಶಿಬಿರದಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ದಿನ ಬೆಳಗ್ಗೆ 6 ರಿಂದ 8ರವರೆಗೂ ಈ ಶಿಬಿರ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಟೆನಿಕಾಯ್ಡ್, ಯೋಗ, ಏರೋಬಿಕ್ಸ್ ಇತ್ಯಾತಿ ಕ್ರೀಡೆಗಳ ತರಬೇತಿಯನ್ನು ನುರಿತ ದೈಹಿಕ ಶಿಕ್ಷಕರಿಂದ ಕೊಡಲಾಗುತ್ತಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ವಿದ್ಯಾರ್ಥಿಗಳು, ಮಾಹಿತಿಗಾಗಿ ಆರ್. ನಾಗರಾಜ್- 9663212422 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
10ರಿಂದ ಯೋಗ ಶಿಬಿರ
ಕೋಲಾರ: ನಗರದ ಶ್ರೀಪತಂಜಲಿ ಯೋಗಶಿಕ್ಷಣ ಸಮಿತಿ ವತಿಯಿಂದ ಏ.10ರಿಂದ ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ 8ಗಂಟೆವರೆಗೂ ಉಚಿತ ಯೋಗಶಿಕ್ಷಣ ವಸಂತ ಶಿಬಿರ ಆಯೋಜಿಸಲಾಗಿದೆ.ಶಿಬಿರದಲ್ಲಿ 10 ರಿಂದ 14 ವಯೋವುತಿಯ ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು, ಯೋಗವರ್ಗವು ನಗರದ ಶ್ರೀಪತಂಜಲಿ ಯೋಗವುಂದಿರ, ವಕೀಲರ ಭವನದಲ್ಲಿ ನಡೆಯಲಿದೆ. ಮಕ್ಕಳಿಗಾಗಿ ನಡೆಸುತ್ತಿರುವ ಈ ಶಿಬಿರದಲ್ಲಿ ಆಟಗಳು, ಕಥೆ, ಸೃಜನಶೀಲ ಚಟುವಟಿಕೆಗಳ ಕಲಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಹಾಗೆಯೇ ಮೇ.8 ರಿಂದ 11 ರವರೆಗೂ ಶ್ರೀಕ್ಷೇತ್ರ ಸಿದ್ದರ ಬೆಟ್ಟದಲ್ಲಿ ಮಕ್ಕಳ ಪ್ರಾಥಮಿಕಕ ಯೋಗ ಪ್ರಶಿಕ್ಷಣ ಶಿಬಿರ ಇರುತ್ತದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ವಿ. ವೇಣುಗೋಪಾಲ್ ತಿಳಿಸಿದ್ದಾರೆ. ಇದೇ ರೀತಿ ಯೋಗ ಸಮಿತಿಯಲ್ಲಿ ಏ.10ರ ಬೆಳಗ್ಗೆ 7 ಗಂಟೆಗೆ 80ನೇ ವರ್ಗದ ಸಮಾರೋಪ ಮತ್ತು 81 ನೇ ವರ್ಗದ ಉದ್ಘಾಟನಾ ಸಮಾರಂಭವೂ ನಡೆಯಲಿದೆ ಎಂದು ತಿಳಿಸಿದ್ದಾರೆ.
ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು
ಮಾಗಡಿ: ಬಿಎಂಟಿಸಿ ಬಸ್, ಟಿವಿಎಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ತಾವರೆಕೆರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಗುಲಗಂಜಿಗನಹಳ್ಳಿ ವಾಸಿ ನಂಜಪ್ಪ(60) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಹಿಂಬದಿ ಸವಾರ ಸಿದ್ದರಾಮಯ್ಯ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಳುವನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.