ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ

Rashmi Kasaragodu
Updated On : 7 Apr 2014, 1:17 am

ಮುಳಬಾಗಲು: ತಾಲೂಕಿನ ಕಪ್ಪಲಮೊಡಗು ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಸರ್ಕಾರದ ಪರವಾಗಿ ತಹಸೀಲ್ದಾರ್ ಏಕೇಶ್‌ಬಾಬು ರಥಕ್ಕೆ ಚಾಲನೆ ನೀಡಿದರು. ಸುತ್ತಮುತ್ತಲ ಸಾವಿರಾರು ಮಂದಿ ಭಕ್ತಾಧಿಗಳು ತೆಂಗಿನ ಕಾಯಿ ದೀಪಗಳನ್ನು ಹೊತ್ತು ತಂದು ದೇವರ ದರ್ಶನ ಪಡೆದರು. ಬೆಳಿಗ್ಗೆ ಮೂಲದೇವರಿಗೆ ಅಲಂಕಾರ, ಅಸ್ದಾನ ಸೇವೆ, ಕೃಷ್ಣಗಂಧೋತ್ಸವ, ಪಾನಕ ಪೂಜೆ, ಮುಂತಾದ ಕಾರ್ಯಕ್ರಮಗಳು ನಡೆಯಿತು. ರಥೋತ್ಸವದಲ್ಲಿ ರಾಜಸ್ವ ನಿರೀಕ್ಷಕ ಅಲಂಗೂರು ನಾಗರಾಜ್, ಎಂ.ಮುತ್ತಪ್ಪ, ಮುಖ್ಯ ಅರ್ಚಕರಾದ ಆರ್.ಭಾರಾಧ್ವಜ್, ಸಂಚಾಲಕ ಕೆ.ಎಲ್.ಶ್ರೀನಿವಾಸಗೌಡ ಭಾಗವಹಿಸಿದ್ದರು.



ಆರೋಪಿಗಳ ಬಂಧನಕ್ಕೆ ಆಗ್ರಹ
ಚಿಂತಾಮಣಿ: ತಾಲ್ಲೂಕಿನ ಶಿಂಗಸಂದ್ರ ಗ್ರಾಮದ ದಲಿತ ಕಾಲೋನಿ ನಿವಾಸಿಗಳ ಮೇಲೆ ನೀರಿನ ವಿಷಯವಾಗಿ ಹಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡಿರುವ ಆರೋಪಿಗಳನ್ನು ಪೋಲೀಸರು ಪತ್ತೆ ಹಚ್ಚಿ ಬಂಧಿಸಬೇಕೆಂದು ಡಿವೈಎಸ್ಪಿ ಸಣ್ಣತಿಮ್ಮಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ. ಕುಡಿಯುವ ನೀರು ಕಲ್ಪಿಸುವಲ್ಲಿ ವಿಫಲಗೊಂಡಿರುವ ಅಧಿಕಾರಿಗಳ ವಿರುದ್ಧ ದಲಿತ ಸೇನೆ ಸಂಘಟನೆ ಖಂಡಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ರಾಜ್ಯಾಧ್ಯಕ್ಷ ಗಣೇಶ್.ಎಸ್ ಕೊಳಗೇರಿ, ತಾಲೂಕು ಅಧ್ಯಕ್ಷ ಹರ್ಷ ಸೇರಿದಂತೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement