ನೇಣಿಗೆ ಶರಣು
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಮೆಲ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಸರಹೋಸಹಳ್ಳಿ ಗ್ರಾಮದ ನಿವಾಸಿ ಮುರಳಿ(35) ಆತ್ಮಹತ್ಯೆ ಮಾಡಿಕೊಂಡವ. ಈತ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಕಳವು
ಮುಳಬಾಗಲು: ತಾಲೂಕಿನ ಕೆ.ಕೊಂಡೇನಹಳ್ಲಿ ಗ್ರಾಮದ ಮನೆಯಲ್ಲಿ ಆಭರಣ ಕಳವು ಮಾಡಿರುವ ಸಂಬಂಧ ಪಟ್ಟಣದ ಠಾಣೆಯಲ್ಲಿ ಭಾನುವಾರ ಕೇಸು ದಾಖಲಾಗಿದೆ. ಪದ್ಮನಾಭ ಚಾರಿ ಎಂಬುವರು ದೂರು ಸಲ್ಲಿಸಿ, ತನ್ನ ತಾಯಿ ಸರಸ್ವತಮ್ಮ ಸ್ನಾನ ಮಾಡುವ ವೇಳೆಯಲ್ಲಿ ಮೈಮೆಲಿದ್ದ ಲಕ್ಷ ರುಪಾಯಿ ಮೌಲ್ಯ ಬಂಗಾರದ ಅಭರಣಗಳನ್ನು ತೆಗೆದು ದೇವರ ಮನೆಯಲ್ಲಿ ಇಟ್ಟಿದ್ದರು. ನಂತರ ಬಂದು ನೋಡಿದಾಗ ಒಡವೆಗಳು ಕಾಣೆಯಾಗಿವೆ. ಆ ಸಮಯದಲ್ಲಿ ಮನೆಯಲ್ಲಿದ್ದ ತಮ್ಮ ಸಂಬಂಧಿಕ ಚಕ್ರಪಾಣೆ ಇದ್ದರು. ಅವರ ಮೇಲೆ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.