ಮತ್ತೆ ಕಾಂಗ್ರೆಸ್‌ಗೆ ಮರಳಿದ ಕಲ್ಲುಪಲ್ಲಿ ಪ್ರಕಾಶ್
ಮುಳಬಾಗಲು: ರಾಜಕೀಯವಾಗಿ ಕೆ.ಎಚ್.ಮುನಿಯಪ್ಪ ಅವರಿಂದ ದೂರ ಇದ್ದ ತಾಲೂಕಿನ ಯುವ ಮುಖಂಡ ಕಲ್ಲುಪಲ್ಲಿ ಪ್ರಕಾಶ್ ಶನಿವಾರ ರಾತ್ರಿ ಮುನಿಯಪ್ಪ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದರು.
ಪಟ್ಟಣದ ಹೊರವಲಯದ ಸೊನ್ನವಾಡಿ ಗ್ರಾಮದ ವೃತ್ತದ ಮುಂಭಾಗದಲ್ಲಿ ಕಲ್ಲುಪಲ್ಲಿ ಪ್ರಕಾಶ್ ನೇತೃತ್ವದಲ್ಲಿ ಸಮಾವೇಶ ಏರ್ಪಡಿಸಲಾಗಿತ್ತು. ಪ್ರಕಾಶ್ ಮೂಲತಃ ಕಾಂಗ್ರೆಸಿಗರು. ಆದರೆ, ಕಾರಣಾಂತರಗಳಿಂದ ಬೇರೆಯಾಗಿದ್ದರು. ಈಗ ಬೆಂಬಲಿಗರು ಕೋರಿಕೆಯಂತೆ ಮತ್ತೆ ಕಾಂಗ್ರೆಸ್ ಸೇರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಂಜುನಾಥ್, ಕೇಂದ್ರ ಸಚಿವ ಮುನಿಯಪ್ಪ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ರೀತಿಯ ಸೇವೆಸಲ್ಲಿಸಿದ್ದು ಅವರ ಮೇಲೆ ವಿರೋಧಿಗಳು ಅಪಪ್ರಾಚರ ಮಾಡುತ್ತಿದ್ದಾರೆಂದು ದೂರಿದರು. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎನ್.ಎಸ್.ಬಿಸೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್, ಷಹಬಾಜ್ ಖಾನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಹಾಜರಿದ್ದರು.