ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಚ್ಡಿಕೆಯಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ನಿಖಿಲ್ಗೌಡ ಭರವಸೆ

Mainashree
Updated On : 8 Apr 2014, 12:49 pm

ಚಿಕ್ಕಬಳ್ಳಾಪುರ, ಏ.7
ಯುವ ನಾಯಕ ನಿಖಿಲ್ಗೌಡ ಅವರು ತಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ನಗರದಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟದಿಂದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಅವರು, ಕೇವಲ ಕುಮಾರಸ್ವಾಮಿ ಅವರಿಂದ ಮಾತ್ರ ಚಿಕ್ಕಬಳ್ಳಾಪುರ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಉತ್ತಮರು ಯಾರೆನ್ನುವುದನ್ನು ಎಚ್ಚರಿಕೆಯಿಂದ ನಿರ್ಧರಿಸಿ, ಮತದಾರರು ಮತ ಹಾಕಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಚಿಕ್ಕಬಳ್ಳಾಪುರವನ್ನು ಜಿಲ್ಲೆಯನ್ನಾಗಿ ಘೋಷಿಸಿದರು. ಇಲ್ಲಿನ ಸಮಸ್ಯೆಗಳ ಕಡೆಗೆ ವಿಶೇಷ ಒತ್ತು ಕೊಟ್ಟು ಜನರ ಆಶಯಗಳಿಗೆ ಸ್ಪಂದಿಸಿದರು. ಈಗ ಕುಮಾರಸ್ವಾಮಿಯವರೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕ್ಷೇತ್ರದ ಅಭಿವೃದ್ಧಿ ಮುನ್ಸೂಚನೆಯಾಗಿದೆ ಎಂದರು. ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ಸಹ ಅಭಿವೃದ್ಧಿಗೆ  ಶ್ರಮಿಸಲಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಎಂ.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ನಿಷ್ಠೆ ಬದಲಾವಣೆ ನಿಷ್ಣಾತರು!
ಮಾಲೂರು ತಾಲೂಕಲ್ಲಿ 'ಮರಕೋತಿ'ಯಾಟ
ಮಾಲೂರು: ಲೋಕಸಭೆ ಚುನಾವಣೆಗೆ ಮತದಾನ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಜತೆಗೆ, ಗಂಟೆ ಗಂಟೆಗೆ ನಿಷ್ಠೆ ಬದಲಾಯಿಸುವ ಮುಖಂಡರ ಸಂಖ್ಯೆ ಕೂಡಾ ತಾಲೂಕಲ್ಲಿ ಹೆಚ್ಚಾಗುತ್ತಿದೆ.
ಕಳೆದ ವಾರ ಬಿಜೆಪಿಯ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಸೇರಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ತಾಪಂ ಅಧ್ಯಕ್ಷೆ ಆಶಾ ರಾಜಪ್ಪ ಮಾರನೇ ದಿನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಲೂರಿಗೆ ಭೇಟಿ ನೀಡಿದಾಗ ಬಿಜೆಪಿಯಲ್ಲಿ ಕಾಣಿಸಿಕೊಂಡರು. ಬಿಜೆಪಿ ಮುಖಂಡ ರಾಮೇಗೌಡ ಬೆಂಬಲಿಗನಾಗಿದ್ದ ಪಟ್ಟಣದ ಗಾಂಧೀ ಸರ್ಕಲ್ ಬಾಬು ಕಾಂಗ್ರೆಸ್ ಮುಖಂಡ ಚೆನ್ನಕೇಶವ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿ, ಮಾರನೇ ದಿನವೇ ಶಾಸಕ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು. ಕೃಷ್ಣಯ್ಯ ಶೆಟ್ಟಿಯ ಕಟ್ಟಾ ಬೆಂಬಲಿಗ ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ ಕಾಂಗ್ರೆಸ್ ಸೇರುವ ಇಂಗಿತ ಹೊಂದಿದ್ದರು. ಆದರೆ, ಈಗ ಬಿಜೆಪಿಯ ಬೆಂಬಲಕ್ಕೆ ನಿಂತಿದ್ದಾರೆ. ಇದೇ ರೀತಿಯಲ್ಲಿ ಆರ್ಎಸ್ಎಸ್ ಭಾನುವಾರ ಆಯೋಜಿಸಿದ್ದ ಯುಗಾದಿ ಉತ್ಸವದಲ್ಲಿ ಚಂಬೆ ನಾರಾಯಣಗೌಡ ಅವರು, ಸೋಮವಾರ ತಾಲೂಕಿನ ಟೇಕಲ್ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸೇರಿದರು. ಹೀಗಿರುವ ಇವರ ನಿಷ್ಠೆ ಯಾವಾಗ ಯಾರ ಕಡೆಗೆ ಬದಲಾಗುತ್ತದೆ ಎಂಬುದು ಗೊತ್ತಿಲ್ಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement