ಕುಡಿಯುವ ನೀರಿಗೆ ಆಗ್ರಹಿಸಿ ಕೊತ್ತನೂರು ಗ್ರಾಪಂಗೆ ಬೀಗ
ಶಿಡ್ಲಘಟ್ಟ: ಕುಡಿಯುವ ನೀರಿಗೆ ಆಗ್ರಹಿಸಿ ಕೊತ್ತನೂರು ಗ್ರಾಪಂ ಕಚೇರಿಗೆ ಬೀಗ ಹಾಕಿ ನಾಗರಿಕರು ಪ್ರತಿಭಟನೆ ನಡೆಸಿದರು.
ಕುಡಿಯಲು ಸರಿಯಾಗಿ ನೀರನ್ನು ಪೂರೈಕೆ ಮಾಡುತ್ತಿಲ್ಲ. ರಾತ್ರಿ 2 ಗಂಟೆಯ ಸಮಯದಲ್ಲಿ ನೀರು ಬಿಡುತ್ತಾರೆ. ಕೆಲವು ಮುಖಂಡರ ಮನೆಗಳಿಗೆ ಅಕ್ರಮವಾಗಿ ಕೊಳಾಯಿಗಳನ್ನು ಅಳವಡಿಸಿ, ಕೊಟ್ಟಿರುವುದರಿಂದ ನೀರಿನ ಅಭಾವ ಉಂಟಾಗಿದೆ. ಅಕ್ರಮವಾಗಿ ಪಡೆದಿರುವ ಕೊಳಾಯಿಗಳನ್ನು ತೆರವುಗೊಳಿಸುವಂತೆ ಪಂಚಾಯ್ತಿಯ ಅಧಿಕಾರಿಗಳಿಗೆ ಎಷ್ಟೆ ಬಾರಿ ಮನವಿ ಮಾಡಿದ್ದರೂ ಅವರ ಕ್ರಮಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಬೋರ್ವೆಲ್ಗಳಿಗೆ ಮೋಟಾರುಗಳನ್ನು ತಳಮಟ್ಟಕ್ಕೆ ಬೋರ್ವೆಲ್ಗಳಿಗೆ ಮೋಟಾರುಗಳನ್ನು ತಳಮಟ್ಟಕ್ಕೆ ಬಿಟ್ಟಿದ್ದೇವೆ. ಇರುವ ನೀರನ್ನು ಎಲ್ಲಾ ಮನೆಗಳಿಗೆ ಹಂಚಿಕೆ ಮಾಡುತ್ತಿದ್ದೇವೆ. ಒಂದು ಬೀದಿಗೆ ಮಾತ್ರ ಕಳೆದ ಒಂದು ವಾರದಿಂದ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಸ್ಥರಾದ ರಾಜಣ್ಣ, ರವಿಚಂದ್ರ, ರಾಜು ಮುನೇಗೌಡ, ಶಶಿಕಲಾ, ಮಮತ, ಮುನಿಲಕ್ಷಮ್ಮ, ಮಮತ, ರಮೇಶ್ ಪಾಲ್ಗೊಂಡಿದ್ದರು.