'ಚುನಾವಣೆ ವೇಳೆ ದಲಿತರ ಮೇಲೆ ಪ್ರೀತಿ ತೋರುವ ಮುನಿಯಪ್ಪ'
ಚಿಂತಾಮಣಿ: ಚುನಾವಣೆ ವೇಳೆ ಮಾತ್ರ ದಲಿತರ ಮೇಲೆ ಪ್ರೀತಿ ತೋರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಈ ಬಾರಿ ಸೋಲುವುದು ಖಚಿತ ಎಂದು ದಲಿತ ಮೈನಾರಿಟಿ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಕೋಡಿಲ್ ರಮೇಶ್ ಹೇಳಿದರು.
ಚಿಂತಾಮಣಿ ನಗರದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ನಿವಾಸದಲ್ಲಿ ಕರೆಯಲಾಗಿದ್ದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿಯಪ್ಪ ಅವರು ಕೋಲಾರ ಜಿಲ್ಲೆ ಅಭಿವೃದ್ಧಿ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ದಲಿತರ ಮತ ಮೋಹದಿಂದ ಸುಳ್ಳು ಭರವಸೆ ನೀಡುತ್ತಾರೆ. ಗೆದ್ದ ನಂತರ ದಲಿತ ಕೇರಿಗಳಿಗೆ ಭೇಟಿ ನೀಡಿದೆ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ ಎಂದು ದೂರಿದರು.ಜೆಡಿಎಸ್ ಅಭ್ಯರ್ಥಿಯನ್ನು ಮೈನಾರಿಟಿ ದಲಿತ ಸಂಘರ್ಷ ಸಮಿತಿ ಬೆಂಬಲಿಸುತ್ತಿದೆ ಎಂದೂ ಹೇಳಿದರು. ಮುಖಂಡರಾದ ವಿ.ಅಮರ್, ಸುರೇಶ್, ಗೌಸ್ಮ್ದೀನ್, ವೆಂಕಟರವಣ, ಮುನಿಸ್ವಾಮಿ, ಶ್ರೀನಿವಾಸ್ ಸೇರಿ ಅನೇಕರಿದ್ದರು.