ಶಂಕರಲಿಂಗೇಗೌಡ ನಿಧನಕ್ಕೆ ಸಂತಾಪ
ಕೋಲಾರ: ಮಾಜಿ ಶಾಸಕ ಶಂಕರಲಿಂಗೇಗೌಡರ ನಿಧನಕ್ಕೆ ಜಿಲ್ಲಾ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಶ್ರದ್ಧಾಂಜಲಿ ಸಲ್ಲಿಸಿತು.
ನಗರದ ಬಸ್ ನಿಲ್ದಾಣದಲ್ಲಿ ಶಂಕರಲಿಂಗೇಗೌಡರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಸಮಿತಿ ಮುಖಂಡರು, ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ವೇಳೆ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ಶಂಕರಲಿಂಗೇಗೌಡರು ಮೈಸೂರು ಪಾಲಿಕೆ ಮೇಯರ್ ಆಗಿ, ನಾಲ್ಕು ಬಾರಿ ಶಾಸಕರಾಗಿ, ಹನುಮ ದೇವಾಲಯ ನಿರ್ಮಿಸಿ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದ ಮಹಾನ್ ನಾಯಕರು ಎಂದು ಸ್ಮರಿಸಿದರು.
ಅವರ ಟ್ರಸ್ಟ್ನಿಂದ ಮೈಸೂರಿನಲ್ಲಿ ವೃದ್ಧಾಶ್ರಮ, ಆಸ್ಪತ್ರೆ ನಿರ್ಮಿಸಿ ಶೋಷಿತರ, ದೀನದಲಿತರ ಸೇವೆ ಮಾಡಿಕೊಂಡು ಬಂದ ಉತ್ತಮ ರಾಜಕಾರಣಿ ಎಂದು ಸ್ಮರಿಸಿದರು. ಕರವೇ ಕೃಷ್ಣೇಗೌಡ, ಶ್ರೀರಾಮಪ್ಪ, ಮುನೇಗೌಡ, ಎಂ.ಚಂದ್ರಣ್ಣ, ಮುನಿಬೈರಪ್ಪ, ವಿಕಾಸ್ ಬೈರೇಗೌಡ, ಚೌಡೇಗೌಡ, ಕೃಷ್ಣಪ್ಪ, ನಾರಾಯಣಗೌಡ, ವೆಂಕಟೇಗೌಡ, ಗಣೇಶ್ಗೌಡ, ಮುನಿವೆಂಕಟಪ್ಪ, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.