ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಗೆಲವು ನಿಶ್ಚಿತ
ಮಂಗಳವಾರ ಕೋಲಾರಕ್ಕೆ ಬಂದಿದ್ದ ಸಚಿವ ಯು.ಟಿ.ಖಾದರ್ ಅವರು, ಸೋನಿಯಾ ಗಾಂಧಿ ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದರು. ಬಳಿಕ ಅವರು ಮಾತನಾಡಿ, 'ಯುಪಿಎ ಸರ್ಕಾರದ ಸಾಧನೆ ಹಾಗೂ ಆರು ಬಾರಿ ಕೋಲಾರ ಕ್ಷೇತ್ರದಲ್ಲಿ ಗೆದ್ದು ಜನರ ನಡುವೆ ಇದ್ದು ಕೆಲಸ ಮಾಡಿರುವ ಮುನಿಯಪ್ಪ ಗೆಲುವು ಶತಸಿದ್ಧ. ಸೋನಿಯಾ ಗಾಂಧಿ ಭೇಟಿಯಿಂದ ಕಾಂಗ್ರೆಸ್ಗೆ ಇನ್ನಷ್ಟು ಶಕ್ತಿ ಬರಲಿದೆ' ಎಂದರು. ಇದೇ ವೇಳೆ, ಅವರು ಮುನಿಯಪ್ಪ ಮತ್ತು ನಜೀರ್ ಅಹ್ಮದ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು. ಶಾಸಕ ವರ್ತೂರ್ ಪ್ರಕಾಶ್ ಅವರನ್ನು ಕಾಂಗ್ರೆಸಿಗೆ ಸೇರಿಕೊಳ್ಳುವ ಅಧಿಕಾರಿ ನಮಗಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದಷ್ಟೇ ತಿಳಿಸಿದರು.