ಕೋಲಾರ: ಬಿಜೆಪಿಯಿಂದ ಮನೆ ಮನೆ ಪ್ರಚಾರ
ಕೋಲಾರ: ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರ ನಗರದಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ನಗರಸಭೆ ಸದಸ್ಯ ಮುನೇಶ್, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಕಾರ್ಯಕರ್ತರು ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆಯನ್ನು ವಿತರಿಸಿದರು. ನರೇಂದ್ರ ಮೋದಿ ಪ್ರಧಾನಿಯಾದರೆ ಸುಭದ್ರ ಸರ್ಕಾರ ರಚನೆ ಆಗುವ ಜತೆಗೆ ಗುಜರಾತ್ ಮಾದರಿಯಲ್ಲಿ ದೇಶದ ಅಭಿವೃದ್ಧಿಯನ್ನು ಜನರು ನಿರೀಕ್ಷಿಸಬಹುದಾಗಿದ್ದು, ಕ್ಷೇತ್ರದ ಜನತೆ ಈ ಬಾರಿ ಬಿಜೆಪಿ ಮತ ನೀಡುವುದರ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮುಖಂಡರು ಕೋರಿದರು. ಜಯಂತಿಲಾಲ್, ಜಿಲ್ಲಾ ಸಮಿತಿ ಮು. ರಾಘವೇಂದ್ರ, ನೀಲಿ ಜಯಶಂಕರ್, ನಾಮಲ ಮಂಜುನಾಥ್ ಸೇರಿ ಅನೇಕರಿದ್ದರು.