ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿನ್ನದ ಗಣಿ ಕಾರ್ಮಿಕರು ಬೀದಿ

Mainashree
Updated On : 9 Apr 2014, 10:51 am

ಕೆಜಿಎಫ್: ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರು ಬಿಜಿಎಂಎಲ್  ಮುಚ್ಚಲು ಹಾಗೂ ಸುಳ್ಳು ಭರವಸೆಗಳ ಮೂಲಕ ಮೂಖಾಂತರ ಕಾರ್ಮಿಕರ ಕುಟುಂಬಗಳನ್ನು ಬೀದಿಪಾಲು ಮಾಡಲು ಕಾರಣವಾಗಿದ್ದಾರೆ ಎಂದು ಬಿಜೆಪಿ ಶಾಸಕಿ ವೈ ರಾಮಕ್ಕ ಆರೋಪಿಸಿದರು.
ನಗರದ ಆ್ಯಂಡರ್‌ಸನ್‌ಪೇಟೆ ವ್ಯಾಪ್ತಿಯಲ್ಲಿ ಪಾದಯಾತ್ರೆ ಕೈಗೊಂಡು ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರ ಪರವಾಗಿ ಮತಯಾಚಿಸಿ ಬಳಿಕ ಮಾತನಾಡಿದರು. ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ರಚಣೆಯಾಗಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ಬಳಿಕ ಅವರು ಬಿಜಿಎಲ್‌ಎಲ್ ಚಿನ್ನದ ಗಣಿಗಳ ಪುನಶ್ಚೇತನ ಹಾಗೂ ಕಾರ್ಮಿಕರ, ದಿನನಿತ್ಯ ರೈಲು ಪ್ರಯಾಣಿಕರಿ ಸೌಲಭ್ಯ ಕಲ್ಪಿಸಲಿದ್ದಾರೆ ಎಂದರು. ಕ್ಷೇತ್ರದ ಪರಿಚಯವಿಲ್ಲದ ಹಾಗೂ ಪಕ್ಕದ ರಾಜ್ಯದ ವ್ಯಕ್ತಿಯನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿಸಿದೆ ಎಂದರು. ಮಾಜಿ ಶಾಸಕ ಹಾಗೂ ನಗರ ಘಟಕ ಅಧ್ಯಕ್ಷ ಸುರೇಶ್‌ನಾರಾಯಣಕುಟ್ಟಿ ಮಾತನಾಡಿದರು. ನಗರದ ಆಂಡ್ರಸನ್‌ಪೇಟೆ, ರಾಜೇಶ್‌ಕ್ಯಾಂಪ್, ಗೊಳ್ಳಹಳ್ಳಿ, ಭಾರತಿಪುರಂ, ಮಸ್ಕಂ ಗ್ರಾಮ, ಮಾರುಕಟ್ಟೆ ಪ್ರದೇಶ, ಬಜಾರ್‌ರಸ್ತೆ ಮುಂತಾದ ಭಾಗಗಳಲ್ಲಿ ಪಾದೆಯಾತ್ರೆ ಮೂಲಕ ಮತಯಾಚನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement