ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳರು ಪರಾರಿ

Mainashree
Updated On : 9 Apr 2014, 10:51 am

ಚಿಂತಾಮಣಿ: ಬೈನಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಮನೆ ಬೀಗ ಮುರಿದು ಸಾವಿರಾರು ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಬಟ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಬೈನಹಳ್ಳಿ ಗ್ರಾಮದ ಕದಿರಪ್ಪ ಎಂಬುವವರು ಮನೆ ಬೀಗ ಹಾಕಿಕೊಂಡು ಮಂಗಳವಾರ ತೋಟದಲ್ಲಿ ಕೆಲಸಕ್ಕೆ ಹೋಗಿದ್ದರು.  ದ್ವಿಚಕ್ರ ವಾಹನದಲ್ಲಿ ಅಪರಿಚಿತ ಯುವಕರು,  ಮನೆ ಬೀಗ ಮುರಿದು ಕಳ್ಳರು ಬೀರುವಿನಲ್ಲಿದ್ದ ಬಂಗಾರದ ಒಡವೆ ಮತ್ತು ಬೆಳ್ಳಿ ಒಡವೆಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಇದನ್ನ ಕಂಡ ಕದಿರಪ್ಪ ತಾಯಿ ಪಾಪಮ್ಮ ಗಾಬರಿಯಾಗಿ ತಕ್ಷಣ ನೆರೆಹೊರೆಯವರನ್ನು ಜೋರಾಗಿ ಕೂಗಿ ಕಿರುಚಾಡಿದ್ದಾಳೆ. ಪರಿಣಾಮ ಜನರು ಸ್ಥಳಕ್ಕೆ ಆಗಮಿಸಿ ಹಿಡಿಯಲು ಯತ್ನಿಸಿದಾಗ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.
ಪೊಲೀಸರ ಕೈಗೂ ಸಿಗಲಿಲ್ಲ: ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ಬೈನಹಳ್ಳಿ ಗ್ರಾಮಸ್ಥರು ಕಳ್ಳರ ಬಗ್ಗೆ ಮಾಹಿತಿ ನೀಡಿದ್ದಾರೆ. ಬಟ್ಲಹಳ್ಳಿ ಠಾಣೆಯ ಪೋಲೀಸರು ಚಿಂತಾಮಣಿ ಮಾರ್ಗವಾಗಿ ಹೋಗುತ್ತಿರುವ ಮಾಹಿತಿ ಮೇರೆಗೆ ಹಿಂಬಾಸಿಕೊಂಡು ಬೆನ್ನಟ್ಟಿದ್ದಾರೆ.  ದ್ವಿಚಕ್ರ ವಾಹನದಲ್ಲಿ ವೇಗವಾಗಿ ಹೋಗುತ್ತಿದ್ದ ಅವರು ನಗರದ ರೇಲ್ವೆ ಅಂಡರ್‌ಪಾಸ್‌ಬಳಿ ಪೊಲೀಸರ ಕಣ್ ತಪ್ಪಿಸಿ ಪರಾರಿಯಾಗಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement