ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಹಿತೆ ಉಲ್ಲಂಘನೆ ದುರದೃಷ್ಟಕರ: ವಿಶಾಲ್

Mainashree
Updated On : 9 Apr 2014, 10:52 am

ಚಿಕ್ಕಬಳ್ಳಾಪುರ:  ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸು ಪ್ರಕರಣಗಳು ಹೆಚ್ಚಾಗುತ್ತಿರುವುದು ದುರದೃಷ್ಟಕರ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್.ವಿಶಾಲ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು ಪ್ರಚಾರಕ್ಕೆ ಉಪಯೋಗಿಸುವ ಧ್ವನಿವರ್ಧಕ, ವಾಹನ, ಬ್ಯಾನರ್‌ಗಳು ಸೇರಿದಂತೆ ತಮ್ಮ ಪ್ರಚಾರಕ್ಕೆ ಸಂಬಂಧಿಸಿದ ಇತ್ಯಾದಿಗಳನ್ನು ವಿವರಗಳನ್ನು ಅಗತ್ಯವಿರುವ ದಾಖಲೆಗಳೊಂದಿಗೆ ನೀಡಬೇಕು.
 ಮುದ್ರಿಸುವ ಕರಪತ್ರಕ್ಕೂ ಪರವಾನಗಿ ತೆಗೆದುಕೊಳ್ಳಬೇಕು. ಆದರೆ, ಸ್ಟಾರ್ ಪ್ರಚಾರಕರು ಪ್ರಚಾರ ಕೈಗೊಂಡರೆ ಅದರ ವೆಚ್ಚವನ್ನು ದಾಖಲಿಸುವ ಅವಶ್ಯಕತೆ ಇಲ್ಲ.
 20 ಸಾವಿರ ಕ್ಕೂ ಹೆಚ್ಚು ಮೊತ್ತದ ಪ್ರಚಾರದ ಬಿಲ್ಲುಗಳನ್ನು ಚೆಕ್ ಮೂಲಕವೇ ಸಂದಾಯ ಮಾಡಬೇಕು ಎಂದರು.
ಏ.15ರ ಸಂಜೆ 6 ಗಂಟೆಯಿಂದ ಯಾವುದೇ ಪಕ್ಷ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಅಲ್ಲದೆ ಆ ವೇಳೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮನೆಯಿಂದ ಮನೆಗೆ ಐದು ಜನರಿಗೆ ಒಳಪಟ್ಟು ಗುಂಪು ಮಾತ್ರ ಪ್ರಚಾರ ನಡೆಸಬಹುದು ಎದರು.
ನಾಗಾರ್ಜುನ ಕಾಲೇಜಿಲ್ಲಿನಲ್ಲಿ ಎಣಿಕೆ: ಮತ ಎಣಿಕೆಯು ನಾಗಾರ್ಜುನ ಕಾಲೇಜಿನಲ್ಲಿ ನಡೆಯಲಿದೆ.
ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮತದಾನ ಮಾಡಲು ನೆರವಾಗುವ ಪೋಸ್ಟಲ್ ಬ್ಯಾಲೆಟ್ ಗಳನ್ನು ವಿತರಿಸಲಾಗಿದೆ. ಅಲ್ಲದೆ ಮನೆಮನೆಗೆ ವೋಟಸ್ ಸ್ಲಿಪ್ ಸಹ ವಿತರಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕ ಇಮಾದುಲ್ಲಾ ಹಕ್, ಜಿಲ್ಲಾ ಎಸ್‌ಪಿ ದಿವ್ಯಾ ಗೋಪಿನಾಥ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement