ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಬದಿ ಕೋಳಿ ಮಾಂಸ ತ್ಯಾಜ್ಯ; ಜನರಿಗೆ ಕಿರಿಕಿರಿ

Vishwanath S
Updated On : 23 Apr 2014, 12:53 pm

ಬಂಗಾರಪೇಟೆ: ಹೊರವಲಯದ ಹುಣಸನಹಳ್ಳಿ ರೈಲ್ವೆ ಗೇಟ್ ಸಮೀಪ ಬೂದಿಕೋಟೆ ಮುಖ್ಯ ರಸ್ತೆ ಅಂಚಿನಲ್ಲಿ ಕೋಳಿ ಮಾಂಸದ ತ್ಯಾಜ್ಯ ಸುರಿಯಲಾಗಿದೆ.
ಬಂಗಾರಪೇಟೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಸ್‌ನಿಲ್ದಾಣ, ಹುಣಸನಹಳ್ಳಿ ಸಮೀಪದ ರೈಲ್ವೆ ಸೇತುವೆ, ಜೈನ್ ಇಂಟರ್‌ನ್ಯಾಷನಲ್ ಶಾಲೆ ಬಳಿ ಕೋಳಿ ತ್ಯಾಜ್ಯಗಳನ್ನು ಎಸೆದಿರುವುದರಿಂದ ದುರ್ವಾಸನೆ ಮೂಗಿಗೆ ಬಡಿಯುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದ್ದು ಕೂಡಲೆ ಪುರಸಭೆಯವರು ಈ ತ್ಯಾಜ್ಯಗಳನ್ನು ಇಲ್ಲಿಂದ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
 ಪಟ್ಟಣ ಕೋಲಾರ ಮುಖ್ಯ ರಸ್ತೆಯ ಜೈನ್ ಇಂಟರ್‌ನ್ಯಾಷನಲ್ ಶಾಲೆಯಿಂದ ಸುಮಾರು ಎರಡು ಪರ್ಲಾಂಗ್ ಉದ್ದಕ್ಕೂ ಕೋಳಿ ಮಾಂಸದ ತ್ಯಾಜ್ಯ ಸುರಿಯಲಾಗಿದೆ. ಜತೆಗೆ ಕಲ್ಯಾಣ ಮಂಟಪಗಳಲ್ಲಿ ಊಟಕ್ಕೆ ಬಳಸಿದ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಇಲ್ಲೇ ಎಸೆಯಲಾಗಿದೆ. ಸುರಿದಿರುವ ರಾಶಿಯನ್ನು ಬೀದಿ ನಾಯಿಗಳು ನಿತ್ಯ ಕೆಡವುತ್ತಿದ್ದು, ಮತ್ತಷ್ಟು ಕೆಟ್ಟ ವಾಸನೆ ಬೀರುತ್ತಿದೆ.
ಅಲ್ಲದೆ ಮಾಂಸದ ತ್ಯಾಜ್ಯಕ್ಕಾಗಿ ಮುಖ್ಯರಸ್ತೆಯಲ್ಲಿ ನಾಯಿಗಳ ಓಡಾಟ ಹೆಚ್ಚಿದೆ. ಇದರಿಂದ ಅಪಘಾತಗಳೂ ಸಂಭವಿಸುತ್ತಿವೆ.
ಪಟ್ಟಣದಲ್ಲಿ ಸುಮಾರು 60ಕ್ಕೂ ಹೆಚ್ಚು ಅನಧಿಕೃತವಾದ ಚಿಕನ್, ಮಟನ್ ಅಂಗಡಿಗಳು ತೆರೆಯಲಾಗಿದ್ದು,  ಅಂಗಡಿ ಮಾಲೀಕರೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಆದರೆ ಕಸ ವಿಲೇವಾರಿಗೆ ಮೀಸಲಿರಿಸಿದ ಜಾಗದಲ್ಲಿ ವಿಲೇವಾರಿ ಮಾಡದೆ ಪಟ್ಟಣದ ಹೊರವಲಯದ ರಸ್ತೆಯಂಚಿನಲ್ಲಿ ಸುರಿಯುತ್ತಿರುವುದು ಸಮಸ್ಯೆಯಾಗಿದೆ.
 ಒಮ್ಮೆ ಹಿಂದಿನ ಆಡಳಿತ ಮಂಡಳಿ ಅನಧಿಕೃತ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದರೂ ಕೆಲವು ಪುರಸಭೆ ಸದಸ್ಯರೆ ವಿರೋಧ ವ್ಯಕ್ತಪಡಿಸಿದರಿಂದ ಎಗ್ಗಿಲ್ಲದೆ ಮಾಂಸದ ಅಂಗಡಿಗಳು ಪರವಾನಿಗೆ ಇಲ್ಲದೆ ತಲೆ ಎತ್ತಿದೆ ಅಲ್ಲದೆ ಬಡಾವಣೆಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ ಸ್ಥಳಗಳಲ್ಲಿ ಕೋಳಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ, ರಸ್ತೆಯಲ್ಲಿನ ಧೂಳು, ನೊಣಗಳು ಅದರ ಮೇಲೆ ಕೂರುವುದು ಇದನ್ನೇ ಮಾರುವರು ಇದರಿಂದ ಹಲವು ರೋಗಗಳು ಹರಡಲು ಕಾರಣವಾಗಿದೆ. ನೂತನ ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ ಉತ್ಸಾಹಿಯಾಗಿದ್ದು ಅನಧಿಕೃತ ಅಂಗಡಿಗಳಿಗೆ ಕಡಿವಾಣ ಹಾಕುವಲ್ಲಿ ಆಸಕ್ತಿ ತೋರುವರೆ ಎಂದು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement