ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಉದ್ಯೋಗ ಕೈಗೊಳ್ಳಲು ಚೆಕ್‌ಗಳ ವಿತರಣೆ

Vishwanath S
Updated On : 23 Apr 2014, 12:52 pm

ಬಂಗಾರಪೇಟೆ: ಬರಗಾಲದಿಂದ ಬೆಂಡಾಗಿರುವ ಕ್ಷೇತ್ರದ ಜನರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಸಾಲ ನೀಡುತ್ತಿದ್ದು ಇದನ್ನು ಬಳಸಿಕೊಂಡು ಹಿಂದುಳಿದ ವರ್ಗದ ನಿರುದ್ಯೋಗಿ ಯುವಕರು ಸ್ವಾವಲಂಬಿಗಳಾಗಿ ಜೀವಿಸಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಮ್ಮ ನಿವಾಸದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 17 ನಿರುದ್ಯೋಗಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಿಗಮದಿಂದ ನೇರ ಸಾಲ ಯೋಜನೆಯಲ್ಲಿ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಿದೆ. ಈ ವರ್ಷದಲ್ಲಿ ಸಾವಿರಾರು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಕೋಟ್ಯಂತರ ರು. ಸಾಲ ನೀಡಲಾಗಿದೆ. ಇದರಿಂದ ಅವರು ಯಾರ ಹಂಗಿಲ್ಲದೆ ಸ್ವಾವಲಂಭಿಗಳಾಗಿ ಬದುಕುವಂತೆ ಉತ್ತೇಜನ ನೀಡಲಾಗಿದೆ.
ಕ್ಷೇತ್ರ 9 ವರ್ಷಗಳಿಂದ ಬರದಿಂದ ಬಸವಳಿದಿದೆ, ಕುಡಿಯಲು ನೀರಿಗಾಗಿ ಅಭಾವ ನಿರ್ಮಾಣವಾಗಿದೆ. ಇದನ್ನು ನಿವಾರಿಸಲು ಸರ್ಕಾರ ಎಲ್ಲಾ ನೆರವು ನೀಡಿದೆ ಆದರೆ ಕೆಲವು ಕಡೆ ಅಂತರ್ಜಲ ಮಟ್ಟ ಮಿತಿ ಮೀರಿ ಕುಸಿದಿರುವುದರಿಂದ ಸಮಸ್ಯೆ ನಿವಾರಣೆಗೆ ಅಡ್ಡಿಯಾಗಿದೆ. ಪದೇ ಪದೆ ಈ ಸಮಸ್ಯೆ ಬಾರದಂತೆ ಶಾಶ್ವತ ನೀರಾವರಿ ಯೋಜನೆ ತರಲು ಸರ್ಕಾರ ಮುಂದಾಗಿದೆ ಈಗಾಗಲೇ ಎತ್ತಿನ ಹೊಳೆ ಕಾಮಗಾರಿಗೆ ಶಂಕುಸ್ಥಾಪನೆ ಪೂರ್ಣಗೊಳಿಸಿದ್ದು, ನಾಲ್ಕು ತಾಲೂಕಿಗೆ ಅನುಕೂಲವಾಗುವ ಯರಗೋಳ್ ಯೋಜನೆ ಕಾಮಗಾರಿ ಸಹ ಪ್ರಾರಂಭವಾಗಿದೆ. ನಾನು ಅಧಿಕಾರದಿಂದ ಕೆಳಗಿಳಿಯುವ ವೇಳೆಗೆ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ನಿರ್ಗಮಿಸುವುದಾಗಿ ಶಪಥ ಮಾಡಿದರು. ಆದರೆ ವಿಪಕ್ಷಗಳು ಅಭಿವೃದ್ಧಿ ಕಾಮಗಾರಿಗಳಲ್ಲಿ ಕೈಜೋಡಿಸದೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಎಪಿಎಂಸಿ ನಿರ್ದೇಶಕ ಜೋತನಹಳ್ಳಿ ರಾಮಪ್ಪ, ಎಸ್.ಎಂ. ಗೋಪಾಲ್,ಕುಂಬಾಲಪಾಳ್ಯ ಮಂಜುನಾಥ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement