ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉತ್ಸವದಲ್ಲಿ ಪಿಎಸ್‌ಐ ತೊಡೆಗೆ ತಿವಿದ ಕೋಣ

Mainashree
Updated On : 24 Apr 2014, 12:07 pm

ಕ.ಪ್ರ.ವಾರ್ತೆ  ಹರಿಹರ  ಏ.23
ಇಲ್ಲಿನ ಗ್ರಾಮದೇವತೆ ಊರಮ್ಮನ ಉತ್ಸವ ಲಕ್ಷಾಂತರ ಭಕ್ತರ ಸಮ್ಮುಖ ಅದ್ಧೂರಿಯಾಗಿ ನಡೆಯಿತು. ಅಲ್ಲದೆ, ಪಟ್ಟದ ಕೋಣ ಬಲಿ ನೀಡುವ ಸಂದರ್ಭ ಪಿಎಸ್‌ಐ ಒಬ್ಬರನ್ನು ತಿವಿದು ಕೋಣ ಕಣ್ಮರೆಯಾಯಿತು. ಈ ಸಂದರ್ಭ ಲಾಠಿ ಪ್ರಹಾರವೂ ನಡೆದಿದ್ದು ಈ ಬಾರಿಯ ಉತ್ಸವದ ವಿಶೇಷವಾಗಿತ್ತು. ಭಕ್ತರು ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆ ತನಕ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿದರು. “D¨æàÞ... D¨æàÞ...’, “ÔÚ߯VæàÀÞ, ÔÚ߯VæàÀÞ...’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಸಂಪ್ರದಾಯದಂತೆ ಮಂಗಳವಾರ ರಾತ್ರಿ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಚೌಕಿ ಮನೆಯಲ್ಲಿ ಮಹಜೇನಹಳ್ಳಿ ಹಾಗೂ ಕಸಬಾ ಗ್ರಾಮಗಳ ಮುಖ್ಯಸ್ಥರು ಚರಗ ಸಿದ್ಧಪಡಿಸಿ ಅದರ ಒಂದು ಕಾಳೂ ಅಕ್ಕಪಕ್ಕದ ಗಡಿಗಳ ರೈತರು ವಶಪಡಿಸಿಕೊಳ್ಳದಂತೆ ಕಾಯುತ್ತಾ ಕುಳಿತಿದ್ದರು.
ಇತ್ತ ನಗರದ ಮಹಜೇನಹಳ್ಳಿ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗಿನಿಂದ ಮುತ್ತೈದೆಯರಿಂದ ಉಡಿ ತುಂಬಿಸಿಕೊಂಡ ಗ್ರಾಮದೇವತೆ ಊರಮ್ಮನ ಉತ್ಸವ ಮೂರ್ತಿ ರಾತ್ರಿ 12 ಗಂಟೆ ನಂತರ ಚೌಕಿಮನೆಗೆ ತೆರಳಲು ಶಾಸಕ ಎಚ್.ಎಸ್. ಶಿವಶಂಕರ್ ಹಾಗೂ ಉತ್ಸವ ಸಮಿತಿಯ ಮುಖಂಡರು ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement