ಪ್ರತ್ಯೇಕ ಘಟನೆ: ರೈಲಿಗೆ ಸಿಲುಕಿ ಇಬ್ಬರು ಸಾವು
ಬಂಗಾರಪೇಟೆ: ಪ್ರತ್ಯೆಕ ಘಟನೆಗಳಲ್ಲಿ ಇಬ್ಬರು ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ದಾಸರಹೊಸಹಳ್ಳಿ ಗ್ರಾಮದ ಜೆಸಿಂತಾ(58) ಎಂಬುವರೇ ಪಟ್ಟಣದಿಂದ ಬೆಂಗಳೂರಿಗೆ ಹೋಗುವ ಫುಷ್‌ಫುಲ್ ರೈಲು ಚಲಿಸುತ್ತಿದ್ದಾಗ ಹತ್ತಲು ಹೋಗಿ ರೈಲಿನ ಚಕ್ರಕ್ಕೆ ಸಿಲುಕಿ ಮೃತಪಟ್ಟ ದುರ್ದೈವಿಯಾಗಿದ್ದು.ಬುಧವಾರ ಮಧ್ಯಾಹ್ನ ಪಟ್ಟಣದಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ಜೆಸಿಂತಾ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದಂತೆ ಫುಷ್‌ಫುಲ್ ರೈಲು ಚಲಿಸುತ್ತಿದ್ದ ವೇಳೆ ಹತ್ತಲು ಹೋಗಿ ಜೆಸಿಂತಾ ಕೆಳಗೆ ಉರುಳಿದ್ದರಿಂದಾಗಿ ತೀವ್ರ ಗಾಯಗೊಂಡಿದ್ದಾರೆ. ನಂತರ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರೈಲುನಿಲ್ದಾಣದ ಹೊರವಲಯದ ವರದಾಪುರ ಗೇಟ್ ಬಳಿ ಚಲಿಸುವ ರೈಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನೆಡದಿದೆ. ಮೃತನ ವಯಸ್ಸು 35 ವರ್ಷದವನಾಗಿದ್ದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಘಟನೆಯೋ ಎಂಬುದು ತಿಳಿದಿಲ್ಲ. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತನಿಖೆಯನ್ನು ಕೈಗೊಳ್ಳಲಾಗಿದೆ.