ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎ.ಕೃಷ್ಣಪ್ಪಗೆ ಜೆಡಿಎಸ್ ಶ್ರದ್ಧಾಂಜಲಿ

Mainashree
Updated On : 26 Apr 2014, 12:09 pm

ಮಾಲೂರು: ಬುಧವಾರ ನಿಧನರಾದ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರಿಗೆ ಕೃಷಿಕ ಸಮಾಜದಲ್ಲಿ ಜೆಡಿಎಸ್ ಘಟಕ ಶ್ರದ್ಧಾಂಜಲಿ ಸಭೆಯನ್ನು ಶುಕ್ರವಾರ ಆಯೋಜಿಸಿತ್ತು.
ಈ ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರಶೇಖರ್ ಗೌಡ ಮಾತನಾಡಿ, ಸರ್ಕಾರಿ ನೌಕರರಾಗಿದ್ದ ಕೃಷ್ಣಪ್ಪ ಅವರು, ರಾಜಕೀಯಕ್ಕೆ ಬಂದು ಉತ್ತಮ ಸ್ಥಾನಗಳಿಸಿದ್ದರು. ಅವರು ಅಧ್ಯಕ್ಷರಾದ ಮೇಲೆ ಪಕ್ಷದ ಸಂಘಟನೆಗಾಗಿ ಅವರು ದುಡಿಯುತ್ತಿದ್ದ ರೀತಿ ಯುವಕರನ್ನು ನಾಚಿಸುವಂತೆ ಇತ್ತು. ಸದಾ ಕ್ರಿಯಾಶೀಲರಾಗಿದ್ದ ಕೃಷ್ಣಪ್ಪ ಅವರ ನಿಧನದಿಂದ ಪಕ್ಷಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ' ಎಂದು ತಿಳಿಸಿದರು.
ಹಿರಿಯ ಮುಖಂಡ ಆನೇಪುರ ಹನುಮಂತಯ್ಯ, ಪುರಸಭೆ ಸದಸ್ಯ ಮುರಳೀಧರ್ ಮಾತನಾಡಿದರು. ಪುರಸಭೆ ಸದಸ್ಯರಾದ ಅಲೂಮಂಜು, ಮಾಲಾದ್ರಿ, ಜಾಕೀರ್‌ಖಾನ್, ನಗರಾಧ್ಯಕ್ಷ ರಾಮಚಂದ್ರ, ಮುಖಂಡರಾದ ಸುಬ್ರಮಣಿ, ಪ್ರದೀಪ್, ನಾಗರಾಜ್‌ಗೌಡ, ವೇಣು, ಕೇಬಲ್ ನಾಗರಾಜ್, ಆರ್.ಕೆ.ಕೃಷ್ಣಪ್ಪ, ಚೆನ್ನರಾಯಪ್ಪ ಇದ್ದರು.
ಲಕ್ಕೂರಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
ಮಾಲೂರು: ಲಕ್ಕೂರು ಜೆಡಿಎಸ್ ಘಟಕವತಿಯಂದ ಎ.ಕೃಷ್ಣಪ್ಪ ಅವರಿಗೆ ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟಿ.ನಾರಾಯಣಸ್ವಾಮಿ, ಹರೀಶ್, ಮುನಿರಾಜು, ಉದಯ್‌ಕುಮಾರ್, ಎನ್.ವೆಂಕಟೇಶ್, ಎಲ್.ಕೆ.ಶ್ರೀನಿವಾಸ್, ಬಿ.ಮುರಳಿ, ವೆಂಕಟೇಶಪ್ಪ, ವೆಂಕಟಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement