ಡಾ.ರಾಜ್ ಮಹಾನ್ ನಟ: ಭಾರತಮ್ಮ
ಮಾಲೂರು: ಕನ್ನಡ ನಾಡು ನುಡಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದ ಕನ್ನಡದ ಕಂಠೀರಿವ ಡಾ.ರಾಜ್ ದೇಶ ಕಂಡ ಮಹಾನ್ ಮೇರು ನಟ ಎಂದು ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಹೇಳಿದರು.
ಪುರಸಭೆ ಆವರಣದಲ್ಲಿರುವ ಡಾ.ರಾಜ್ ಪ್ರತಿಮೆಗೆ ನಿರ್ಮಿಸಲಾಗಿರುವ ದೀಪಾಲಂಕಾರಕ್ಕೆ ಚಾಲನೆ ನೀಡಿ ಮಾತನಾಡಿ, 'ಕನ್ನಡದ ಸಾಂಸ್ಕೃತಿಕ ಮೌಲ್ಯಗಳನ್ನು ತಮ್ಮ ಪಾತ್ರಗಳ ಮೂಲಕ ಎತ್ತಿ ಹಿಡಿಯುತ್ತಿದ್ದ ಅವರ ನಟನೆ ಕನ್ನಡಿಗರ ಹೃದಯದಲ್ಲಿ ಅಚ್ಚಳಿದೆ ಉಳಿದಿದೆ' ಎಂದರು.
ಮುಖ್ಯಾಧಿಕಾರಿ ರೇಣುಕಾ ಮಾತನಾಡಿದರು. ಸ್ಥಳೀಯ ಡಾ.ರಾಜ್ ಅಭಿಮಾನಿಗಳ ಸಂಘ ಡಾ.ರಾಜ್ ಹುಟ್ಟು ಹಬ್ಬಕ್ಕಾಗಿ ತಯಾರಿಸಿದ್ದ 86 ಕೆ.ಜಿ.ಕೇಕ್ನ್ನು ಗಣ್ಯರು ಕತ್ತರಿಸಿ ಅಭಿಮಾನಿಗಳಿಗೆ ಹಂಚಿದರು. ಬಿಜೆಪಿ ಮುಖಂಡ ಹಾಲು ನಂಜುಂಡಪ್ಪ, ಪುರಸಭೆ ಅಧಿಕಾರಿಗಳಾದ ಜ್ಯೋತಿ, ಲಕ್ಷ್ಮಮ್ಮ, ರವಿ, ನಂಜುಂಡಿ, ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಷಮ್ಮುಖ, ರವಿ, ವೆಂಕಟೇಶ್ ಇದ್ದರು.