ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉತ್ತಮ ವಾತಾವರಣ ಅಗತ್ಯ: ನ್ಯಾ. ಎನ್.ಕೆ.ಪಾಟೀಲ್

Mainashree
Updated On : 27 Apr 2014, 12:11 pm

ಮಾಲೂರು: ನ್ಯಾಯ ಸಮ್ಮತ ತೀರ್ಪು ನೀಡಬೇಕಾದರೆ ನ್ಯಾಯಧೀಶರಿಗೆ ಉತ್ತಮ ವಾತಾವರಣ ನಿಮಾರ್ಣ ಮಾಡಿಕೊಡುವುದು ಅವಶ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾ. ಎನ್.ಕೆ.ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ನಿರ್ಮಿಸಲಾಗಿರುವ ನ್ಯಾಯಾಧೀಶರ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ನ್ಯಾಯಧೀಶರಿಗೆ ಉತ್ತಮ ಸೌಕರ್ಯವುಳ್ಳ ಮನೆಗಳನ್ನು ನಿರ್ಮಿಸಿಕೊಡುತ್ತಿದೆ. ಸರ್ಕಾರದ ಉತ್ತಮ ಸೌಲಭ್ಯದ ಮನೆ ನಿಮಾರ್ಣದ ಉದ್ದೇಶಕ್ಕೆ ಸಾರ್ಥಕತೆ ನೀಡಬೇಕು ಎಂದರು. ಕರ್ನಾಟಕ ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಡಾ.ಜವಾದ್ ರಹೀಂ ಮಾತನಾಡಿದರು. ಇದೇ ವೇಳೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ನ್ಯಾಯಾಧೀಶರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೂ ಮೊದಲು ಗುಡ್ನಹಳ್ಳಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ನ್ಯಾಯಧೀಶರ ವಸತಿ ಗೃಹದ ಕಾಮಗಾರಿಗೆ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement