ಖಾಸಗಿ ಶಾಲೆಗಳಿಂದ ದಿನಾಂಕ ನಿಗದಿ ಮುಂಚೆ ಪ್ರವೇಶ ಆರಂಭ: ಆರೋಪ
ಶಿಡ್ಲಘಟ್ಟ: ಖಾಸಗಿ ಶಾಲೆಗಳು ಅವಧಿಗೂ ಮುಂಚೆ ಪ್ರವೇಶ ಆರಂಭಿಸಿದ್ದರೂ ಶಿಕ್ಷಣ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಡಿವೈಎಫ್ಐ ರಾಜ್ಯ ಮುಖಂಡ ಕುಂದಲಗುಕರ್ ಮುನೀಂದ್ರ ಆರೋಪಿಸಿದ್ದಾರೆ.
ಪ್ರತಿ ವರ್ಷವೂ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ದಿನಾಂಕವನ್ನು ನಿಗದಿಪಡಿಸುತ್ತದೆ. ಆದರೆ ತಾಲೂಕಿನಲ್ಲಿ ದಿನಾಂಕ ನಿಗದಿ ಮುಂಚೆಯೇ ಪ್ರವೇಶ ಪ್ರಕ್ರಿಯೆ ಶುರು ಮಾಡಲಾಗಿದೆ. ರಾಜಾರೋಷವಾಗಿ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆರ್ಟಿಇ ಕಾಯಿದೆಯಡಿಯಲ್ಲಿ ಆಯ್ಕೆಯಾಗಿರುವ ಮಕ್ಕಳಿಂದ ಸಮವಸ್ತ್ರ, ಪುಸ್ತಕ, ವಾಹನ ಶುಲ್ಕ, ಪಠ್ಯಪುಸ್ತಕಗಳ ಹೆಸರಿನಲ್ಲಿ ವಸೂಲಿ ಮಾಡುತ್ತಿರುವ ಹಣವನ್ನು ವಸೂಲಿ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.