ರಾಧಾಕೃಷ್ಣ ಕೊಲೆ ಆರೋಪಿ ಮನೆ ಧ್ವಂಸ
ಕೋಲಾರ: ಮುಳಬಾಗಲು ತಾಲೂಕಿನ ಅಸಲಿ ಅತ್ತಿಕುಂಟೆಯ ನಿವಾಸಿ, ಸಿಪಿಐ ಮುಖಂಡ ರಾಧಾಕೃಷ್ಣ ಅವರನ್ನು ಕೊಲೆ ಮಾಡಿ ತಲೆ ಮರಿಸಿಕೊಂಡಿರುವ ಗ್ರಾಮದ ಶಿವಕುಮಾರ್ ಮನೆಯನ್ನು ಉದ್ರಿಕ್ತರು ದ್ವಂಸ ಮಾಡಿದ್ದಾರೆ.
ಶಿವಕುಮಾರ್ ಹೆಂಚಿನ ಮನೆಯನ್ನು ದ್ವಂಸ ಮಾಡಿರುವ ಉದ್ರಿಕ್ತರು ಮನೆಯಲ್ಲಿದ್ದ ವಸ್ತುಗಳನ್ನು ನಾಶ ಮಾಡಿದ್ದಾರೆ.
ರಾಧಾಕೃಷ್ಣ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಕೆಜಿಎಫ್ ಬೈಪಾಸ್ ಬಳಿ ಭೀಕರವಾಗಿ ಕೊಲೆ ಮಾಡಿದ್ದು ಇದಕ್ಕೆ ಪ್ರತಿಕಾರವಾಗಿ ಆರೋಪಿಗಳ ಮನೆಗಳನ್ನು ದ್ವಂಸ ಮಾಡಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವಣ ಮುಂದುವರೆದಿದ್ದು ಪೊಲೀಸ್ ಕಾವಲು ಹಾಕಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.