ವಿಜೃಂಭಣೆಯ ಬ್ರಹ್ಮರಥೋತ್ಸವ
ಶಿಡ್ಲಘಟ್ಟ: ಶನಿದೇವರ ಸ್ವಸಹಾಯ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ಶನಿದೇವರ ಮತ್ತು ಶ್ರೀ ಓಂಕಾರೇಶ್ವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶೀಗೇಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಶನಿದೇವರ ದೇವಾಲಯದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ನಾಗರಿಕರು ಭಾಗವಹಿಸಿದ್ದರು. ಮೂರು ದಿನಗಳ ಕಾಲನಡೆಯುವ ಈ ಜಾತ್ರೆಯಲ್ಲಿ ನಾದಸ್ವರ, ತಮಟೆವಾದನಗಳಿಗೆ ತಕ್ಕಂತೆ ಹೆಜ್ಜೆಹಾಕಿ ನೆರೆದಿದ್ದವರನ್ನು ರಂಜಿಸಿದ ಕೀಲು ಕುದರೆಗಳು, ವಿವಿಧ ವೇಷಭೂಷಣಗಳು, ಗಾರುಡಿ ಬೊಂಬೆಗಳು, ನೆರೆದಿದ್ದವರ ಗಮನಸೆಳೆದವು. ಊಟದ ವ್ಯವಸ್ಥೆ ಮಾಡಲಾಗಿತ್ತು.
ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರಿಗೆ ಮಜ್ಜಿಗೆ ಪಾನಕಗಳನ್ನು ವಿತರಿಸಲಾಯಿತು. ಇದರೊಂದಿಗೆ ಎಲ್ಲರ ಗಮನ ಸೆಳೆದ ಉಟ್ಲುಸೇವೆಯನ್ನು ನೆರವೇರಿಸಲಾಯಿತು.