ಅನೈತಿಕ ಸಂಬಂಧ: ಪತ್ನಿ ಸಾಯಿಸಿ, ಆತ್ಮಹತ್ಯೆ
ಚಿಂತಾಮಣಿ: ಏಟಿಗುಡ್ಡ ಗೊಲ್ಲಪಲ್ಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ದೊರೆತಿದ್ದ ಎರಡು ಶವಗಳ ಪ್ರಕರಣಕ್ಕೆ ತಿರುವು ದೊರೆತಿದ್ದು, ಗಂಡನೇ ತನ್ನ ಪತ್ನಿಯನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ. ಇದಕ್ಕೆ ಗಂಡನ ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದು ಬಂದಿದೆ. ತಾಲೂಕಿನ ಶೆಟ್ಟಿನಾಯಕನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ ಗಂಗರಾಜು(22) ಅವರು ಆಂಧ್ರದ ಬಿ.ಕೊತ್ತಕೋಟ ಬಳಿ ಇರುವ ಬೂಶಿಪಲ್ಲಿ ಗ್ರಾಮದ ಕಲ್ಪನಾ(20) ಅವರನ್ನು 6 ತಿಂಗಳ ಹಿಂದೆ ಮದುವೆಯಾಗಿದ್ದರು. ಗಂಡ ಪತ್ನಿ ಜತೆ ಅನ್ಯೋನ್ಯವಾಗಿರಲಿಲ್ಲ. ಇದಕ್ಕೆ ಪತ್ನಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು. ಎಲ್ಲಿ ತನ್ನ ಅನೈತಿಕ ಸಂಬಂಧ ಗೊತ್ತಾಗುತ್ತದೆಯೋ ಎಂಬ ಭಯದಿಂದ ಗುರುವಾರ ಪತ್ನಿಯನ್ನು ಊರಿಗೆ ಕರೆದುಕೊಂಡು ಹೋಗುತ್ತೇನೆಂದು ಏಟಿಗುಡ್ಡ ಗೊಲ್ಲಪಲ್ಲಿಯ ನಿರ್ಜನ ಪ್ರದೇಶಕ್ಕೆ ಕರೆ ತಂದಿದ್ದಾನೆ. ಅಲ್ಲಿ ಪತ್ನಿಯನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ. ಪ್ರಕಣ ದಾಖಲಿಸಿಕೊಂಡಿರುವ ಬಟ್ಲಹಳ್ಳಿಯ ಠಾಣೆ ಪಿಎಸ್‌ಐ ವೀಣಾಕುಮಾರ್ ತನಿಖೆ ನಡೆಸುತ್ತಿದ್ದಾರೆ.