ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೋತನ ಭಾಗವತ ಸಂಪುಟ ಸಮರ್ಪಣೆ

Mainashree
Updated On : 29 Apr 2014, 12:46 pm

ಚಿಂತಾಮಣಿ: ಕೈವಾರ ಯೋಗಿ ನಾರೇಯಣ ಮಠದದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಗದ್ಯಾನುವಾದ ಪೋತನ ಭಾಗವತ 8 ಸಂಪುಟಗಳನ್ನು ತಾತಯ್ಯನವರಿಗೆ ಸಮರ್ಪಿಸಲಾಯಿತು.
ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಪುಸ್ತಕ ಬಿಡುಗಡೆ ಅಂಗವಾಗಿ ಸದ್ಗರು ತಾತಯ್ಯನವರ ಉತ್ಸವ ವಿಗ್ರಹಗಳಿಗೆ ವಿಶೇಷ ಅಭಿಷೇಕ, ಅಷ್ಠಾವಧಾನ ಸೇವೆ ಸಲ್ಲಿಸಲಾಯಿತು. ಅಲಂಕೃತ ಪೀಠದಲ್ಲಿ ಪೋತನ ಭಾಗವತದ ಪುಸ್ತಕಗಳನ್ನು ಇಟ್ಟು ಪೂಜೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿದ್ದ ತೆಲುಗು ಆಧ್ಯಾತ್ಮ ಪ್ರವಚನಕಾರ ಚಾಗಂಟಿ ಕೋಟೇಶ್ವರ ರಾವ್ ಅವರನ್ನು ಸ್ವಾಗತಿಸಲಾಯಿತು. ನಾದಸುಧಾರಸ ಸಂಚಾಲಕರಾದ ವಾನರಾಸಿ ಬಾಲಕೃಷ್ಣ ಭಾಗವತ್ ಅವರು ಪೋತನ ಭಾಗವತ ಹಾಗೂ ಕೈವಾರ ತಾತಯ್ಯನವರ ಸಾಹಿತ್ಯದ ಉಪನ್ಯಾಸ ನೀಡಿದರು. ಈ ಸಮಾರಂಭದಲ್ಲಿ ಆಂಧ್ರ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಲ್.ವಿ.ಸುಬ್ರಮಣ್ಯಂ, ಶ್ರೀ ಯೋಗಿನಾರೇಯಣ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಾಬು ಕೃಷ್ಣಮೂರ್ತಿ, ವಿಭಾಕರ ರೆಡ್ಡಿ, ಟ್ರಸ್ಟ್ ಸದಸ್ಯರು, ಚಿಂತಾಮಣಿ ಶ್ರೀರಾಮ ಮಂದಿರದ ಅಧ್ಯಕ್ಷ ಜಿ.ಎಚ್.ವೆಂಕಟೇಶಮೂರ್ತಿ, ವಕೀಲರಾದ ಬಿ.ಆರ್.ಶ್ರೀನಾಥ್, ಬಿ.ಆರ್.ಪ್ರಭಾಕರ್,ಶ್ರೀರಾಮಮೂರ್ತಿ, ಜಿ.ಜಯರಾಮ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement