ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಕಾಮಗಾರಿಗೆ ಒತ್ತಾಯ

Mainashree
Updated On : 29 Apr 2014, 12:46 pm

ಕೋಲಾರ: ರಸ್ತೆ ಅಗಲೀಕರಣದ ನಂತರ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ, ಕೋಲಾರ ತಾಲೂಕಿನ ಖಾದ್ರಿಪುರ, ಕಾರಂಜಿಕಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಗರದ ಖಾದ್ರಿಪುರದ ಬಳಿ 30 ಅಡಿ ರಸ್ತೆಯ ಅವಶ್ಯಕತೆಯಿದ್ದು, ಸಂಬಂಧಪಟ್ಟ ಇಲಾಖೆಯವರು ಕೇವಲ 18 ಅಡಿ ರಸ್ತೆ ನಿರ್ಮಾಣ ಮಾಡಿರುವುದರಿಂದ ವಾಹನಗಳ ಓಡಾಡಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ರಸ್ತೆ ಅಗಲೀಕರಣದ ನಂತರ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿದರು. ಗುತ್ತಿಗೆದಾರ ಮುನಿರಾಜು ಅವರು ಎರಡು ಬದಿಯಿಂದ ರಸ್ತೆಯನ್ನು ಅಳತೆ ಮಾಡಿ ರೇಲ್ವೆ ಇಲಾಖೆಯ ಎಂಜನಿಯರ್‌ಗಳ ಗಮನಕ್ಕೆ ತಂದು, ರಸ್ತೆ ಅಗಲೀಕರಣಕ್ಕೆ ಒಪ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಗ್ರಾಮಸ್ಥರು ಕೈಬಿಟ್ಟರು.
ಪ್ರತಿಭಟನೆಯ ನೇತೃತ್ವವನ್ನು ಖಾದ್ರಿಪುರ ಗ್ರಾಪಂ ಸದಸ್ಯ ರಾಜೇಶ್, ನಿರಂಜನ್, ರವಿ, ಅಂಬರೀಶ್, ಹರಿಕೃಷ್ಣ, ಶಿವರಾಜ್, ಮುನಿಯಪ್ಪ, ಬಾಬು, ಸಿಂಗ್ ಮತ್ತಿತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement