ಹಳೇ ದ್ವೇಷ: ಮನೆಯಲ್ಲಿದ್ದ ವಸ್ತುಗಳು ದ್ವಂಸ
ಕೆಜಿಎಫ್: ಹಳೇ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ದ್ವಂಸಗೊಳಿಸಿ ಬೀರುವಿನಲ್ಲಿದ್ದ ಸೀರೆಗಳಿಗೆ ಬಂಕಿ ಹಚ್ಚಿರುವ ಘಟನೆ ರಾಬರ್ಟ್‌ಸನ್‌ಪೇಟೆ ಠಾಣಾ ವ್ಯಾಪ್ತಿಯ ಸಂಜಯಗಾಂಧಿನಗರದಲ್ಲಿ ನಡೆದಿದೆ.
ಸಂಜಯಗಾಂಧಿನಗರ ನಿವಾಸಿ ವಸಂತ್ ಹಾಗೂ ಆಂಡ್ರಸನ್‌ಪೇಟೆಯ ನಿವಾಸಿ ಡಿಸೆಲ್ವಾ ನಡುವೆ ಹಳೇ ದ್ವೇಷದ ಹಿನ್ನಲೆಯಲ್ಲಿ ಆಗಾಗ ಜಗಳ ನಡೆಯುತ್ತಿದ್ದು ಎರಡು ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಇದರಿಂದ ವಸಂತ್ ಮನೆಗೆ ಅಕ್ರಮವಾಗಿ ನುಗ್ಗಿದ ಆರೋಪಿಗಳಾದ ವಿಕ್ರಂ ಹಾಗೂ ಸ್ಟಾಲೀನ್ ಮನೆಯಲ್ಲಿದ್ದ ಟಿವಿ ಶೋಕೇಸ್, ಕಲರ್ ಟಿವಿ ಸೇರಿದಂತೆ ಇತರೇ ವಸ್ತುಗಳನ್ನು ದ್ವಂಸಗೊಳಿಸಿ ಬೀರುವಿನಲ್ಲಿದ್ದ ಸೀರೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸುಮಾರು ರು. 15 ಸಾವಿರ ನಷ್ಟವುಂಟಾಗಿದೆ ಎಂದು ಮನೆಯಲ್ಲಿದ್ದ ವಸಂತನ ತಾಯಿ ರಾಜೇಶ್ವರಿ ರಾಬರ್ಟ್‌ಸನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.