ಅಧಿಕಾರಿಗಳಿಗೆ ನೋಟಿಸ್
ಮಳವಳ್ಳಿ: ಮೇ 2ರಂದು ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವುದಾಗಿ ತಾಲೂಕು ದಂಡಾಧಿಕಾರಿ ಬಸವರಾಜಪ್ಪ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿ ಎದ್ದುಕಾಣುತ್ತಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಾತಿ ಬಗ್ಗೆ ಸಭೆಯಲ್ಲಿ ಮುಖಂಡರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದು ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿ ಕೈಗೊಳ್ಳುದಾಗಿ ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಬಸವರಾಜಪ್ಪ, ಶಿರಸ್ತೇದಾರ್ ಮಹದೇವು, ಜಿಪಂ ಸದಸ್ಯ ವಿಶ್ವಾಸ್, ಪ್ರಕಾಶ್, ಮೂರ್ತಿ ಇದ್ದರು.