ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಈಗ ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ ಬೇಕು: ವರ್ತೂರ್

Mainashree
Updated On : 29 Apr 2014, 11:20 am

ಕೋಲಾರ: ಪೌರಾಣಿಕ ನಾಟಕಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಹಿರಿಯ ರಂಗ ಕಲಾವಿದ ಮುನಿರೆಡ್ಡಿ ಅವರಿಗೆ ಕಲಾಭಿಮಾನಿಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ ಎಂದು ಶಾಸಕ ವರ್ತೂರ್ ಪ್ರಕಾಶ್ ಹೇಳಿದರು.
ತಾಲೂಕಿನ ವೇಮಗಲ್ ಹೋಬಳಿ ಮದ್ದೇರಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ಜಿಲ್ಲಾ ಮಟ್ಟದ ನಾಟಕೋತ್ಸವ ಮತ್ತು ರಂಗಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋಮುಲ್ ನಿರ್ದೇಶಕ ಮದ್ದೇರಿ ಎಸ್. ರಾಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಮದ್ದೇರಿ ಗ್ರಾಮದಲ್ಲಿ ಹಿಂದಿನಿಂದಲೂ ಜಾತ್ರಾ ಉತ್ಸವ ಸಮಯದಲ್ಲಿ ನಾಟಕಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಎಷ್ಟೇ ಕಷ್ಟ ಬಂದರೂ ತಾನೇ ಮುಂದೆ ನಿಂತು ನಾಟಕಗಳ ನಿರ್ದೇಶನ ಮಾಡಿ ತಾಲೂಕಿನ ಕೀರ್ತಿ ರಾಜ್ಯಾದ್ಯಂತ ಪಸರಿಸಿದ ಕೀರ್ತಿ ಪಿ.ಮುನಿರೆಡ್ಡಿ ಅವರಿಗೆ ಸಲ್ಲುತ್ತದೆ ಎಂದರು.
ಭೂ ನ್ಯಾಯಮಂಡಳಿ ಮಾಜಿ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ಸಮಾಜ ಸೇವಕ ಎಂ.ವೆಂಕಟೇಶ್ ಮಕ್ಕಡ್ ಆಶ್ರಯ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್, ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಕಾಂತರಾಜ್, ಸದಸ್ಯ ರವಿಕುಮಾರ್, ಅಭಿವೃದ್ಧಿ ಅಧಿಕಾರಿ ಮಧುಮತಿ ಐ.ಮಂಜುನಾಥ್, ಎಲ್.ನಾರಾಯಣಸ್ವಾಮಿ ಇದ್ದರು. ಗೌಡರ ರಾಜಣ್ಣ ಸ್ವಾಗತಿಸಿ, ಎನ್.ನಾಗರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement