ಚಾಕು ತೋರಿಸಿ ದರೋಡೆ
ಕೋಲಾರ: ತಾಲೂಕಿನ ಪೆಮ್ಮಶೆಟ್ಟಿಹಳ್ಳಿಯ ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಕೋಲಾರ ನಗರದ ಪೇಟೆಚಾಮನಹಳ್ಳಿಯ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಕಂಪನಿ ಕ್ಯಾಷಿಯರ್ ಸೋಮರಾಜು ಎಂಬುವರನ್ನು ಚಾಕು ತೋರಿಸಿ ರು. 30 ಸಾವಿರ ನಗದು,ದಾಖಲೆಗಳು ಹಾಗೂ ರು. 25 ಸಾವಿರ ಬೆಲೆಯ ಹ್ಯಾಂಡಲ್ ಡಿವೈಸ್ ಅನ್ನು ದೋಚಿರುವ ಘಟನೆ ನಡೆದಿದೆ.
ಮೈಕ್ರೋ ಫೈನಾನ್ಸ್ ಕಂಪನಿಯಿಂದ ನೀಡಿರುವ ಸಾಲವನ್ನು ವಸೂಲಿ ಮಾಡಲು ಸೋಮರಾಜು ಬೈಕಿನಲ್ಲಿ ನಾಗಲಾಪುರ ಗ್ರಾಮಕ್ಕೆ ಹೋಗಿ ಅಲ್ಲಿಂದ ಪೆಮ್ಮಶೆಟ್ಟಿಹಳ್ಳಿಯ ಗ್ರಾಮಕ್ಕೆ ಹೋಗಲು ಆಂಜನೇಯಸ್ವಾಮಿ ದೇವಾಲಯದ ಬಳಿ ಇರುವ ನೀಲಗಿರಿ ತೋಪಿನ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಇಂಡಿಕಾ ಕಾರು ಸೋಮರಾಜು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸೋಮರಾಜು ಕೆಳಗೆ ಬಿದ್ದಾಗ ಕಾರಿನಲ್ಲಿದ್ದ ಐವರು ಕೃತ್ಯ ಎಸಗಿ ಪರಾರಿ ಆಗಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.