ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀಲಗಿರಿ ನಿಷೇಧಕ್ಕೆ ಸಹಕರಿಸಿ: ಡಿಸಿ

Mainashree
Updated On : 29 Apr 2014, 11:20 am

ಕೋಲಾರ: ಅಂತರ್ಜಲ ಸಮಸ್ಯೆಗೆ ನೀಲಗಿರಿ ಬೆಳೆ ಕಾರಣವಾಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ನೀಲಗಿರಿ ಬೆಳೆಯುವುದನ್ನು ತಡೆಯಲು ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಮನವಿ ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಚರ್ಚಿಸಲು ಕರೆಯಲಾಗಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇನ್ನಿತರ ಕಡೆಗೆ ಹೊಲಿಕೆ ಮಾಡಿದಲ್ಲಿ ಕೋಲಾರದಲ್ಲಿ ವಾರ್ಷಿಕ ಮಳೆಯ ಪ್ರಮಾಣ ಜಾಸ್ತಿ ಇದ್ದರೂ ಅಂತರ್ಜಲ ಕೊರತೆಗೆ ಜಿಲ್ಲೆಯಾದ್ಯಂತ ಬೆಳೆದಿರುವ ನೀಲಗಿರಿ ಮರಗಳೇ ಕಾರಣವೆಂದು ಪ್ರತಿಪಾದಿಸಿದರು.
ಎಲ್ಲಿ ನೀಲಗಿರಿ ಬೆಳೆಯಲಾಗಿದೆಯೋ ಅಲ್ಲಿ ಭೂಮಿಯ ಫಲವತ್ತು ಕ್ಷಿಣಿಸಿರುತ್ತದೆ. ಮಳೆ ನೀರು ಭೂಮಿಯಲ್ಲಿ ಇಂಗುವುದಿಲ್ಲ. ನೀಲಗಿರಿ ಬೆಳೆದ ಮೇಲೆ ಏಳು ವರ್ಷ ಕಟಾವು ಮಾಡಲು ಆಗುವುದಿಲ್ಲ. ಇದರಿಂದಾಗಿ ಈ ಏಳು ವರ್ಷ ನೀರಿಗಾಗಿ ಪರದಾಡುವಂತಾಗುತ್ತದೆ. ಶಾಸಕರು ಹಾಗೂ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಜನಪ್ರತಿನಿಧಿಗಳು ಕೃಷಿ ಭೂಮಿಯಲ್ಲಿ ಮತ್ತು ಖಾಸಗಿ ಜಾಗಗಳಲ್ಲಿ ನೀಲಗಿರಿ ನಿಷೇಧ ಮಾಡಲು ಜಿಲ್ಲಾ ಆಡಳಿತಕ್ಕೆ ಸಹಕಾರ ನೀಡಬೇಕೆಂದು ಕೋರಿದರು. ನೀಲಗಿರಿ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥ್, 'ನೀಲಗಿರಿ ನಿಷೇಧಿಸುವುದರಿಂದ ಸಣ್ಣ ರೈತರಿಗೆ ತೊಂದರೆಯಾಗುತ್ತದೆ. ಹಾಗೊಂದು ವೇಳೆ ನಿಷೇಧ ಮಾಡಬೇಕಾದ ಅನಿವಾರ್ಯತೆ ಇದ್ದರೆ ರೈತರಿಗೆ ನಷ್ಟ ಪರಿಹಾರ ನೀಡಿ ನಂತರ ನಿಷೇಧ ಮಾಡಿ ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement