ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿತ್ತನೆ ಬೀಜ ಮಾರಾಟ

Mainashree
Updated On : 29 Apr 2014, 11:30 am

ತಿಪಟೂರು: ತಾಲೂಕಿನಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿ ಅಲ್ಲಲ್ಲಿ ಹದವಾದ ಮಳೆ ಬಿದ್ದಿರುವುದರಿಂದ ರೈತರಿಗೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಜಯಪ್ಪ ತಿಳಿಸಿದ್ದಾರೆ. ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ತೊಗರಿ, ಎಳ್ಳು ಬೆಳೆಗಳನ್ನು ಬಿತ್ತನೆ ಮಾಡಲು ಸೂಕ್ತ ಕಾಲವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಾದ ಕಸಬಾ, ಬಿಳಿಗೆರೆ, ಹೊನ್ನವಳ್ಳಿ ಮತ್ತು ನೊಣವಿನಕೆರೆ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು,ಈ ಬಿತ್ತನೆ ಬೀಜಗಳನ್ನು ರೈತರಿಗೆ ಗುರುತಿನ ಚೀಟಿ ಮತ್ತು ಪಹಣಿ ನಕಲುಗಳನ್ನು ಪಡೆದು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳಲ್ಲಿ ವಿತರಿಸಲಾಗುತ್ತಿದ್ದು, ಎಲ್ಲಾ ಬಿತ್ತನೆ ಬೀಜಗಳು 5 ಕೆಜಿ ಪ್ಯಾಕೆಟ್‌ನಲ್ಲಿ ದೊರೆಯುತ್ತಿವೆ.
5ಕೆಜಿ ಹೆಸರು ಕಾಳಿಗೆ ರೂ.450 ಇದ್ದು 120 ಸಹಾಯಧನ ಕಳೆದು ರೈತರಿಗೆ ರು.330 ಸಿಗಲಿದೆ. ಅದೇ ರೀತಿ ಸಹಾಯ ಧನ ಕಳೆದು ತೊಗರಿ ರು.295, ಅಲಸಂದೆ ರು.240 ಮತ್ತು ಉದ್ದು ರು.275ಕ್ಕೆ ದೊರೆಯುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement