ವಾಲಿಬಾಲ್ ಪಂದ್ಯಾವಳಿ: ಚೆನ್ನೈ ತಂಡಕ್ಕೆ ಜಯ
ಕೋಲಾರ: ನಗರದ ಮಿನಿ ಕ್ರೀಡಾಂಗಣದಲ್ಲಿ ವಿವೇಕಾನಂದ ವಾಲಿಬಾಲ್ ಕ್ಲಬ್ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ವಾಲಿ ಬಾಲಲ್ಟೂರ್ನಿಮೆಂಟಟ್ಪಂದ್ಯಾವಳಿಯಲ್ಲಿ ತಮಿಳುನಾಡಿನ ಚೆನ್ನೈನ ಅನಿಲ್ ಫ್ರೇಂಡ್ಸ್ ತಂಡ ಪ್ರಥಮ ಬಹುಮಾನ ಹಾಗೂ 35 ಸಾವಿರ ನಗದು ಪಡೆದುಕೊಂಡಿತು.
ಎಸ್.ವಿ.ವಿ.ಸಿ ದ್ವೀತೀಯ ಬಹುಮಾನ ಹಾಗೂ 25 ಸಾವಿರ ನಗದು ಮತ್ತು ತಮಿಳು ನಾಡಿನ ಚನೈ ಹೇಮಂತ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಟೂರ್ನಿಯಲ್ಲಿ ಒಟ್ಟು 14ತಂಡಗಳು ಭಾಗವಹಿಸಿದ್ದವು. ಒಕ್ಕಲಿಗರ ಸಂಘದ ನಿರ್ದೇಶಕರಾದ ವಕ್ಕಲೇರಿ ರಾಮು, ಸತೀಶ್ ಬಹುಮಾನ ವಿತರಿಸಿದರು. ಬೆಮೆಲ್ ಶ್ರೀನಿವಾಸ್ ಟ್ರೊಫಿ ಮತ್ತು ಗುತ್ತಿಗೆದಾರ ವಿ. ಕೃಷ್ಣಾರೆಡ್ಡಿ ಬಹುಮಾನ ಪ್ರಾಯೋಜಿಸಿದರು.