ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚರಂಡಿ ಕಳಪೆ ಕಾಮಗಾರಿ: ರಮೇಶ್ ಕುಮಾರ್ ಗರಂ

Rashmi Kasaragodu
Updated On : 2 Aug 2014, 12:38 pm

ಕೋಲಾರ/ಶ್ರೀನಿವಾಸಪುರ: ಗುತ್ತಿಗೆದಾರರು ಹಣ ಸಂಪಾದನೆಯೇ ದೊಡ್ಡ ಸಾಧನೆ ಎಂದು ಭಾವಿಸಬಾರದು. ಸರ್ಕಾರ ಕಾಮಗಾರಿಗಳಿಗೆ ಕೋಟಿಗಟ್ಟೆಲೆ ಹಣ ನೀಡುತ್ತಿದೆ. ಕಳಪೆ ಕಾಮಗಾರಿಗಳ ಮೂಲಕ ಜೇಬಿಗೆ ಹಣ ತುಂಬಿಸಿಕೊಂಡರೆ ದೇವರು ಕ್ಷಮಿಸಲ್ಲ ಎಂದು ಶಾಸಕ ರಮೇಶ್ ಕುಮಾರ್ ತಿಳಿಸಿದರು.
ತಾಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗವಾದಿ ಗ್ರಾಮಕ್ಕೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಕಾಲುವೆ, ಚರಂಡಿ ಕಾಮಗಾರಿಗಳಲ್ಲಿ ಆಗಿರುವ ಲೋಪಕ್ಕೆ ಕುಪಿತರಾಗಿ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಎಂಜನಿಯರ್ ಬೈರಾರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿಯನ್ನು ಕೂಡಲೇ ಸರಿಪಡಿಸಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 8 ದಿನದೊಳಗೆ ಕೊಳವೆ ಬಾವಿ ಕೊರೆಸುತ್ತೇನೆಂದರು.
ಗ್ರಾಪಂ ವಿರುದ್ಧ ಆರೋಪ: 220 ಕುಟುಂಬಗಳಿರುವ ಗ್ರಾಮದಲ್ಲಿ, ನಿರ್ಮಲ ಭಾರತ್ ಯೋಜನೆ ಅಡಿಯಲ್ಲಿ 3 ವರ್ಷದ ಹಿಂದೆ ನಿರ್ಮಿಸಿಕೊಂಡಿರುವ 80 ಶೌಚಾಲಯಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಹಣ ಕೊಟ್ಟಿಲ್ಲವೆಂದು ಗ್ರಾಮಸ್ಥರು ದೂರಿದರು.
ಮುಂದಿನ ಗ್ರಾಮ ಸಭೆಯೊಳಗೆ ಊರಿನ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಿಸಿರುವ ಮಾಹಿತಿ ನೀಡಬೇಕು. ಶೌಚಾಲಯ ನಿರ್ಮಿಸಲು ಹಣ ಕೊರತೆ ಇಲ್ಲ. ಗ್ರಾಮದ ಪ್ರಗತಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 60 ಲಕ್ಷ ರು. ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಿಗೆ ಪ್ರವಾಸ: ಶಾಸಕರು ಮಾಸ್ತಾನಹಳ್ಳಿ ಮತ್ತು ದಳಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲಗೇರನಹಳ್ಳಿ, ಗುಮ್ಮರೆಡ್ಡಿಪುರ, ಹೂವಹಳ್ಳಿ ಸೇರಿದಂತೆ 21 ಗ್ರಾಮಗಳ ಪ್ರವಾಸ ಮಾಡಿ ಜನತೆಯ ಸಮಸ್ಯೆಯನ್ನು ಅಲಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ವೀರಭದ್ರಸ್ವಾಮಿ, ತಾ.ಪಂ ಅಧ್ಯಕ್ಷ ಗುರ್ರಪ್ಪ, ಸದಸ್ಯ ಕೆ.ಕೆ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement