ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ದುರಸ್ತಿ: ಸಂಚಾರಕ್ಕೆ ಅಡಚಣೆ

Rashmi Kasaragodu
Updated On : 2 Aug 2014, 12:36 pm

ಬಂಗಾರಪೇಟೆ: ಪಟ್ಟಣದಿಂದ ಬೂದಿಕೋಟೆಗೆ ಸಂಚರಿಸುವ ಮುಖ್ಯ ರಸ್ತೆಯಲ್ಲಿ ಹಾದುಹೋಗಿರುವ ಕೋಲಾರ ಮಾದ ರೈಲ್ವೆ ಗೇಟ್ ಬಳಿ ಮೂರು ದಿನದಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
 ರೈಲ್ವೆ ಗೇಟ್ ಮುಚ್ಚಿದ ಸಂದರ್ಭ ರಸ್ತೆ ಎರಡೂ ಕಡೆ ಅರ್ಧ ಕಿಲೋ ಮೀಟರ್ ದೂರ ವಾಹನಗಳು ನಿಲ್ಲುತ್ತವೆ. ಅಲ್ಲದೆ ಪಟ್ಟಣದಿಂದ ಬೂದಿಕೋಟೆಯತ್ತ ಸಾಗುವ ಈ ರಸ್ತೆ ಒಂದು ಕಿಲೋ ಮೀಟರ್ ದೂರದ(ಹುಣಸನಹಳ್ಳಿ ರೈಲ್ವೆ ಗೇಟ್ವರೆಗೂ ತೀರ ಚಿಕ್ಕದಾಗಿದ್ದು, ನಿತ್ಯ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿದೆ. ಎರಡು ಭಾರಿ ವಾಹನಗಳು ಎದುರಾದರೆ ಚಲಿಸಲು ಕಷ್ಟಸಾಧ್ಯ. ಹಾಗಾಗಿ ರೈಲ್ವೆ ಗೇಟ್ ತೆರೆದಿದ್ದರೂ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಆಂಬುಲೆನ್ಸ್ ಬಂದರೂ ಕಾಯುವುದು ಅನಿವಾರ್ಯ.
 ಹಲವು ಬಾರಿ ಈ ರಸ್ತೆಯಲ್ಲಿ ಉಂಟಾಗುವ ಜಾಮ್ನಿಂದಾಗಿ ಪಟ್ಟಣದ ಬಸ್ನಿಲ್ದಾಣದವರೆಗೂ ವಾಹನಗಳು ನಿಲ್ಲುತ್ತವೆ. ಇದರಿಂದ ಕೆಜಿಎಫ್-ಕೋಲಾರ ಮುಖ್ಯ ರಸ್ತೆಯಲ್ಲಿನ ಸಂಚಾರ ವ್ಯವಸ್ಥೆಗೂ ತೊಂದರೆಯಾಗುತ್ತಿದೆ.
ಬೂದಿಕೋಟೆ ಹೋಬಳಿ ಕೇಂದ್ರಕ್ಕೆ ಹಾಗೂ ಮಾಲೂರು ತಾಲೂಕಿಗೆ ಪಟ್ಟಣದಿಂದ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
 ಪ್ರಸಿದ್ಧ ಮಾರ್ಕಂಡಯ್ಯ ಜಲಾಶಯಕ್ಕೂ ಇದೇ ಮಾರ್ಗ. ಅಲ್ಲದೆ ಟೇಕಲ್, ಮಾಲೂರು ಮೂಲಕ ಬೆಂಗಳೂರಿಗೆ ಹೋಗುವ ವಾಹನಗಳು ಈ ರಸ್ತೆಯೆಲ್ಲೇ ಚಲಿಸುತ್ತವೆ.
ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ದ್ವಿಪಥ ರಸ್ತೆ ಕೈಗೊಳ್ಳಬೇಕು ಎಂಬ ಸಂಘ ಸಂಸ್ಥೆಗಳ ಬೇಡಿಕೆ ಹಾಗೇ ಉಳಿದಿದೆ.
ರಸ್ತೆ ವಿಸ್ತರಣೆಗೆ ಎರಡೂ ಕಡೆ ಅಡೆತಡೆಗಳಿದ್ದು, ಒಂದು ಕಡೆ ರೈಲ್ವೆ ಇಲಾಖೆ ವಸತಿಗೃಹದ ಸುತ್ತುಗೋಡೆ, ಮತ್ತೊಂದೆಡೆ ಖಾಸಗಿ ಮನೆಗಳಿವೆ. ಅಲ್ಲದೆ ಅರ್ಧ ಕಿಲೋ ಮೀಟರ್ ಅಂತರದಲ್ಲೇ ಎರಡು ರೈಲ್ವೆ ಗೇಟ್ಗಳಿವೆ. ಬೆಂಗಳೂರು ಚೆನ್ನೈ ರೈಲು ಮಾರ್ಗ. ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗಗಳ ಮೂಲಕ ರಸ್ತೆ ಹಾದುಹೋಗಿದೆ. ಬೆಂಗಳೂರು-ಚೆನೈ ಮಾರ್ಗದಲ್ಲಿ ನಿತ್ಯ ಅರ್ಧ ತಾಸಿಗೊಂದು ರೈಲು ಚಲಿಸುತ್ತಿದೆ. ಮೇಲುಸೇತುವೆ (ಫ್ಲೈಓವರ್ ಕಾಮಗಾರಿ ಸ್ಥಗಿತಗೊಂಡು ವರ್ಷವಾಗಿದೆ.
ರಸ್ತೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎರಡೂ ಕಡೆ ಸಮವಾಗಿ ವಿಸ್ತರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವ್ವಾಹಕ ಎಂಜಿನಿಯರ್ ಎಸ್.ಸಂಪತ್ಕುಮಾರ್ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement