ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಸಿದರೆ ಕ್ರಮ
ಕೋಲಾರ: ಜಿಲ್ಲೆಯಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿರುವುದರಿಂದ ಹೊಸದಾಗಿ ಕೊಳವೆ ಬಾವಿ ಕೊರೆಸಲು ಅನುಮತಿ ನೀಡುತ್ತಿಲ್ಲ. ಒಂದು ವೇಳೆ ಕೊಳವೆ ಬಾವಿ ಅನಿವಾರ್ಯವೆನಿಸಿದಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಒಂದು ವೇಳೆ ಸರ್ಕಾರದ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಆಗಿರುವ ಅನಾಹುತದಿಂದ ಪ್ರತಿಯೊಬ್ಬರು ಎಚ್ಚರವಹಿಸಬೇಕಾಗಿದೆ. ವಿಫಲ ಕೊಳವೆ ಬಾವಿ ಮುಚ್ಚಿಸುವ ಸಂಬಂಧ ಜನತೆಯಲ್ಲಿ ಅರಿವು ಮೂಡಿಸಲಾಗುತ್ತದೆ. ಗ್ರಾಪಂ ಪಿಡಿಒಗಳು, ಗ್ರಾಮ ಲೆಕ್ಕಿಗರು ಈ ಕಾರ್ಯಕ್ಕೆ ಹೆಚ್ಚಿನ ಸಹಾಯ ಮಾಡಬೇಕಾಗಿದೆ. ಜಿಲ್ಲೆಯಾಧ್ಯಂತ ತೆರೆದ ಕೊಳವೆ ಬಾವಿಗಳ ಮಾಹಿತಿ ಇಲ್ಲ. ಪತ್ತೆ ಮಾಡಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ವೀರಶೇಖರಸ್ವಾಮಿ, ಹಿರಿಯ ಭೂ ವಿಜ್ಞಾನಿ(ಅಂತರ್ಜಲ),ಕೋಲಾರ