ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಸ್ಕಾಂ ವಿರುದ್ಧ ಆಕ್ರೋಶ

Rashmi Kasaragodu
Updated On : 5 Aug 2014, 12:29 pm

ಗೌರಿಬಿದನೂರು: ರಾಜ್ಯ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು ಅಗತ್ಯ ವಿದ್ಯುತ್ ಸರಬರಾಜು ಮಾಡದೆ ನಿರ್ಲಕ್ಷ್ಯತೋರುವ ಮೂಲಕ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರ ಪಂಪ್‌ಸೆಟ್ ಹಾಳಾಗುತ್ತಿದ್ದು ಬೆಳೆಗಳಿಗೆ ನೀರನ್ನೂ ಸರಬರಾಜು ಮಾಡಲಾಗದೆ ಬೆಳೆ ಒಣಗುತ್ತಿರುವುದರಿಂದ ರೈತ ಕಂಗಾಲಾಗಿದ್ದು ತಕ್ಷಣವೇ ಸರ್ಕಾರ ಕನಿಷ್ಠ 8 ಗಂಟೆ ಕಾಲ 3 ಫೇಸ್ ವಿದ್ಯುತ್ ನೀಡಬೇಕೆಂದು ಬಿಜೆಪಿ ಮುಖಂಡರಾದ ಎನ್. ಜ್ಯೋತಿರೆಡ್ಡಿ ಆಗ್ರಹಿಸಿದರು.
  ಗೌರಿಬಿದನೂರು ಪಟ್ಟಣದ ಬೆಸ್ಕಾಂ ವಿರುದ್ಧ ತಾಲೂಕು ಬಿಜೆಪಿ ರೈತಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕಚೇರಿ ಮುತ್ತಿಗೆ ಹಾಗೂ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
  ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ಮಾತನಾಡಿ ರೈತರಿಗೆ 2ರಿಂದ 3ಗಂಟೆಯೂ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ತಾಲೂಕಿನಲ್ಲಿ ಬರ ಉಂಟಾಗಿದೆ ಅಲ್ಪಸ್ವಲ್ಪ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಬೇಡಿಕೆಗಳ ಈಡೇರಿಕೆಗೆ ಬದ್ಧ: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ಅವರು ಮಾತನಾಡಿ ಲೋಡ್‌ಶೆಡ್ಡಿಂಗ್ ನಾವು ಮಾಡುತ್ತಿಲ್ಲ ಬೆಂಗಳೂರು ಕೇಂದ್ರದಿಂದಲೇ ಮಾಡಲಾಗುತ್ತದೆ, ಭಾಗ್ಯಜ್ಯೋತಿ ಯೋಜನೆ ಸ್ಥಗಿತಗೊಳಿಸುತ್ತಿಲ್ಲ ಕೇಂದ್ರ ಸರ್ಕಾರವೇ ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡುತ್ತಿದ್ದು ಇದು ಪಾರರ್ದಶಕವಾಗಿದೆ ಸುಮಾರು 7 ಸಾವಿರ ಬಡವರನ್ನು ಆಯ್ಕೆ ಮಾಡಲಾಗಿದೆ ಸುಮಾರು 140 ಗ್ರಾಮಗಳಲ್ಲಿ ಸರ್ವೆ ಮುಗಿದಿದೆ. 6700ಜನರ ಪಟ್ಟಿ ಮಾಡಿದ್ದಾರೆ, 220ಕೆ.ವಿ. ಸ್ಟೇಷನಲ್ಲಿ ಯಾವುದೇ ವಿದ್ಯುತ್ ಕಡಿತ ಮಾಡುತ್ತಿಲ್ಲ 19 ಫೀಡರ್‌ಗಳ ಕಾಮಗಾರಿ ನಡೆಯುತ್ತಿದ್ದು ನಗರಗೆರೆ, ಡಿಪಾಳ್ಯ ಹಾಗೂ ವಾಟದಹೊಸಹಳ್ಳಿ  7 ಪೀಡರ್‌ಗಳ ಕಾಮಗಾರಿ ನಡೆಯುತ್ತಿರುವುದರಿಂದ ಹಾಲಿ ಇರುವ 600 ಅಕ್ರಮ ಸಕ್ರಮಗಳಿಗೆ ಸರ್ಕಾರ ಆದ್ಯತೆ ಮೇಲೆ ಟ್ರಾನ್ಸಾಫಾರ್ಮರ್ ಅಳಡಿಸಲಾಗುತ್ತಿದ್ದು 100 ಪೂರ್ಣಗೊಂಡಿದೆ. 400 ಸಂಪರ್ಕಗಳನ್ನು 3ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.   ಪ್ರತಿಭಟನೆಯಲ್ಲಿ ರೈತಮೋರ್ಚಾ ಅಧ್ಯಕ್ಷ ಶ್ರೀನಿವಾಸಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ನಾರಾಯಣರೆಡ್ಡಿ, ರಮೇಶ್‌ರಾವ್ ವಿಳ್ಕೆ, ತಾಲೂಕು ಅಧ್ಯಕ್ಷ ಗೋಪಿನಾಥ್, ಮಾರ್ಕೆಟ್ ಮೋಹನ್, ಸವಿತಾ, ಮುನಿಲಕ್ಷ್ಮಮ್ಮ, ಜಯಲಕ್ಷ್ಮಮ್ಮ, ಡಿಪಾಳ್ಯ ಶಶಿಧರ್, ನಾರಾಯಣರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement