ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸಿ: ಡಾ.ಕರ್ಜಗಿ ಅಭಿಮತ
ಗೌರಿಬಿದನೂರು: ರಾಷ್ಟ್ರೀಯ ಮತ್ತು ಗ್ರಾಮ ವಿದ್ಯಾ ಸಂಘದ ವತಿಯಿಂದ ಆಚಾರ್ಯ ಮಹಿಳಾ ಕಾಲೇಜು, ಆಚಾರ್ಯ ಪದವಿ ಪೂರ್ವ ಕಾಲೇಜು, ಆಚಾರ್ಯ ಪ್ರೌಡಶಾಲೆ, ಆಚಾರ್ಯ ಪ್ರೈಮರಿ ಶಾಲೆ, ಮಂಚೇನಹಳ್ಳಿ ಆಚಾರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಎಲ್ಲಾ ಉಪನ್ಯಾಸಕರು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಡಾ. ಗುರುರಾಜ ಕರ್ಜಗಿಯವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಡಳಿತ ಮಂಡಳಿಯ ಸದಸ್ಯರು ಭಾಗಿಯಾಗಿದ್ದು, ಕು. ಪುಟ್ಟಲಕ್ಷ್ಮಿ ಮತ್ತು ಪುಷ್ಪ ಪ್ರಾರ್ಥನೆ ಮತ್ತು ಡಾ. ಗುರುರಾಜ ಕರ್ಜಗಿಯವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ಗುರುರಾಜ ಕರ್ಜಗಿ, ಮಾನವೀಯ ಮೌಲ್ಯಗಳ ಜೊತೆಗೆ ನೈತಿಕ ಮೌಲ್ಯಗಳನ್ನು ಜೊತೆಗೂಡಿಸಿದಾಗ ಶಿಕ್ಷಣದ ಗುಣಮಟ್ಟ ಹೆಚ್ಚಿಸಬಹುದೆಂದು ಹೇಳಿದರು. ಎ.ಎನ್. ಬಲರಾಂ ಸ್ವಾಗತ ಮಾಡಿದರು ಪ್ರೊ. ಸುಧಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.