ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಷ್ಟಾಚಾರವಿಲ್ಲದ ಸಮ್ಮೇಳನ

Rashmi Kasaragodu
Updated On : 5 Aug 2014, 12:31 pm

ಚಿಂತಾಮಣಿ: ಕನ್ನಡ ತೃತೀಯ ಸಾಹಿತ್ಯ ಸಮ್ಮೇಳನ ಶಿಸ್ತಿಲ್ಲದ ಸಮ್ಮೇಳನವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಎನ್. ವೆಂಕಟಾಚಲಪತಿ ಆರೋಪಿಸಿದ್ದಾರೆ. ನಗರದಲ್ಲಿ 3 ದಿನಗಳ ಕಾಲ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊಟೋಕಾಲ್ ಪ್ರಕಾರ ಅನುಸರಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸ್ಮರಣ ಸಂಚಿಕೆ ಮತ್ತು ಮೊದಲ ದಿನ ವೇದಿಕೆಯಲ್ಲಿ ಅಶಿಸ್ತು, ಚುನಾಯಿತ ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳ ಅವಮಾನವಾದಂತೆ ಇತ್ತು ಎಂದು ಹೇಳಿದ್ದಾರೆ. ಭಾವಚಿತ್ರಗಳನ್ನು ಸ್ವೀಕರಿಸಿ ಸ್ಮರಣ ಸಂಚಿಕೆಯಲ್ಲಿ ಹಾಕದೆ ಇರುವುದು ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ. ಜಿಪಂ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಪಂ ಅಧ್ಯಕ್ಷ ಸ್ಕೂಲ್ ಸುಬ್ಬಾರೆಡ್ಡಿ, ನಗರಸಭಾ ಉಪಾಧ್ಯಕ್ಷ ತುಳಸಿರವಿ ಸೇರಿದಂತೆ ಇನ್ನೂ ಹಲವರಿಗೆ ಆಹ್ವಾನ ಪತ್ರಿಕೆಯಲ್ಲಿ ಮತ್ತು ಸ್ಮರಣ ಸಂಚಿಕೆಯಲ್ಲಿ ಭಾವಚಿತ್ರ ಪ್ರಕಟಿಸದಿರುವುದು ವಿಷಾಧನೀಯ ಎಂದಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟವರು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕೆಂದು ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಎನ್. ವೆಂಕಟಾಚಲಪತಿ ಒತ್ತಾಯಿಸಿದ್ದಾರೆ. ಆಗಷ್ಟ್ 22 ರಂದು ಮೈಸೂರಿನ ಮಹಾರಾಜ ಕಾಲೇಜಿನ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮ್ಮೇಳನ, ಆಗಷ್ಟ್ 7 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಏರ್ಪಡಿಸಿರುವ ಶೈಕ್ಷಣಿಕ ಸಮ್ಮೇಳನದಲ್ಲಿ ಹಾಜರಾಬೇಕೆಂದು ಡಿಲಿಜಿಯನ್ ಶಾಲೆಯ ಶಿಕ್ಷಕ ನಂಜಪ್ಪರೆಡ್ಡಿ ಮನವಿ ಮಾಡಿದ್ದಾರೆ. ವಿವರಗಳಿಗೆ 8553427599 ಗೆ ಸಂಪರ್ಕಿಸಲು ಕೋರಿದ್ದಾರೆ.
ಕಬ್ಬಿಣದ ಹರಾಜು 7ಕ್ಕೆ
ಮಾಲೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಕಲ್ಲಿನ ಕಾಂಪೌಂಡ್ ನಿರ್ಮಿಸಿರುವ ಹಿನ್ನೆಲೆಯಲ್ಲಿ ತೆರವುಗೊಂಡಿರುವ ಕರ್ಬ್ಬಿಣದ ಫೆನ್ಸಿಂಗ್ ಗುರುವಾರ ಕಾಲೇಜು ಅಭಿವೃದ್ಧಿ ಸಮಿತಿ ಹರಾಜು ಹಾಕಲಿದೆ. ಆಸಕ್ತರು ಗುರುವಾರ ಬೆಳಿಗ್ಗೆ 11 ಗಂಟೆ ಒಳಗೆ ಕಾಲೇಜು ಕಚೇರಿಯಲ್ಲಿ ಐದು ಸಾವಿರ ರು. ಠೇವಣಿ ಇಟ್ಟು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಷರತ್ತು ಒಳಗೊಂಡಿರುವ ಹರಾಜಿನಲ್ಲಿ ಅಂತಿಮ ತೀರ್ಮಾನ ಕಾಲೇಜು ಸಮಿತಿಯದಾಗಿದೆ ಎಂದು ತಿಳಿಸಿರುವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ, ಹರಾಜಿನಿಂದ ಬಂದ ಹಣವನ್ನು  ಕಾಲೇಜು ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದ್ದಾರೆ.
ಸಂತಾಪ
ಚಿಂತಾಮಣಿ: ಕನ್ನಡ ಪರ ಹೋರಾಟಗಾರ ಹಾಗೂ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಎಚ್.ಇಬ್ರಾಹಿಂ ಸಾಬ್(84) ನಿಧನಕ್ಕೆ ಇಲ್ಲಿನ ಹಲವು ಸಂಘ ಸಂಸ್ಥೆಗಳು ಕಂಬನಿ ಮಿಡಿದಿವೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿ ಗಡಿಭಾಗದ ಕನ್ನಡಿಗರಿಗೆ ಪ್ರೀತಿ ಪಾತ್ರರಾಗಿದ್ದ ಇಬ್ರಾಹಿಂ ಸಾಬ್‌ರವರು ನದಾಫ್ ಪಿಂಜಾರ ಜನಾಂಗವನ್ನು ಪ್ರವರ್ಗ 1 ಕ್ಕೆ ಸೇರಿಸುವಲ್ಲಿ ಶ್ರಮಿಸಿದ್ದಾರೆ. ಇವರ ನಿಧನದಿಂದಾಗಿ ರಾಜ್ಯಕ್ಕೆ ಮತ್ತು ಪಿಂಜಾರ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಚಿಕ್ಕಬಲ್ಳಾಪುರ ಜಿಲ್ಲಾ ನದಾಫ್ ಸಂಘದ ಅಧ್ಯಕ್ಷ ಎನ್. ಮುಸ್ತಾನ್ ವಲಿ ಸಂತಾಪ ಸೂಚಿಸಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ, ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಕೆ.ಎನ್. ಅಕ್ರಂಪಾಷ ಮತ್ತು ಕನ್ನಡ ಸಾಹಿತ್ಯ ವೇದಿಕೆ ಕೆ.ಎಸ್. ನೂರುಲ್ಲಾ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಜಗಳ: ವ್ಯಕ್ತಿಗೆ ತೀವ್ರ ಗಾಯ
ಶಿಡ್ಲಘಟ್ಟ: ನೀಲಗಿರಿ ಮರಗಳನ್ನು ಕಟಾವು ಮಾಡುವ ವಿಚಾರದಲ್ಲಿ ವ್ಯಕ್ತಿಯೊಬ್ಬನ ಮೇಲೆ ನಡೆದಿರುವ ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಕುಂಬಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹಾರಡಿ ಗ್ರಾಮದ ಬತ್ಲೇಗೌಡ ಗಾಯಗೊಂಡಿರುವ ವ್ಯಕ್ತಿ. ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಟಾವು ಮಾಡುವ ವಿಚಾರವಾಗಿ ಜಗಳ ನಡೆದು ಬತ್ಲೇಗೌಡ ಎಂಬುವರು ಹಲ್ಲೆ ಮಾಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪ್ಪತ್ರೆಗೆ ದಾಖಲಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement