ಅನುದಾನಿತ ಶಾಲಾ ನೌಕರರ ಸಭೆ ನಾಳೆ
ಟೇಕಲ್: ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಬೆಂಗಳೂರು ವತಿಯಿಂದಆ.7ಕ್ಕೆ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸಮ್ಮೇಳನ ಏರ್ಪಡಿಸಲಾಗಿದೆ. ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಹಾಜರಾಗಲು ಸರ್ಕಾರ ಸೌಲಭ್ಯ ಮಂಜೂರು ಮಾಡಿದ್ದು, ನೌಕರರು ಹಾಜರಾಗುವಂತೆ ಅನುದಾನಿತ ಶಾಲಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸಯ್ಯ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.