ತಾಪಂ ಕೆಡಿಪಿ ಸಭೆ ನಾಳೆ
ಕೋಲಾರ: ಕೋಲಾರ ತಾಲೂಕು ಪಂಚಾಯಿತು ಅಧ್ಯಕ್ಷ ಮಂಜುನಾಥಗೌಡ ಅಧ್ಯಕ್ಷತೆಯಲ್ಲಿ ಆ.7ರ ಬೆಳಿಗ್ಗೆ 11 ಗಂಟೆಗೆ ತಾಪಂ ಸಭಾಂಗಣದಲ್ಲಿ ಕೆಡಿಪಿ ಸಭೆ ಏರ್ಪಡಿಸಲಾಗಿದೆ ಎಂದು ತಾಪಂ ಇಒ ತಿಳಿಸಿದ್ದಾರೆ. ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿ ವರದಿಗಳೊಂದಿಗೆ ಖುದ್ದು ಹಾಜರಾಗದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.