ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರತಿಭಟನೆಗೆ ಮಣಿದು ಶಿಕ್ಷಕನ ವರ್ಗಾವಣೆ ರದ್ದು

Rashmi Kasaragodu
Updated On : 6 Aug 2014, 1:24 am

ಟೇಕಲ್: ತಿಪ್ಪಸಂದ್ರ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾ ಶಿಕ್ಷಣ ಇಲಾಖೆ ವರ್ಗಾವಣೆಯಾಗಿದ್ದ ಶಿಕ್ಷಕ ಸಂಪಂಗಿರನ್ನು ಮತ್ತೆ ತಿಪ್ಪಸಂದ್ರ ಶಾಲೆಗೆ ವರ್ಗಾಯಿಸಿದೆ.
ಶಿಕ್ಷಕರ ತಾತ್ಕಾಲಿಕ ನಿಯೋಜನೆ ವಿರೋಧಿಸಿ ಕರ್ನಾಟಕ ದಲಿತ ಸಿಂಹ ಸೇನೆ ಜಿಲ್ಲಾ ಸಮಿತಿ, ಶಾಲಾ ವಿದ್ಯಾರ್ಥಿಗಳು, ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಅಧಿಕಾರಿಗಳು ಸ್ಪಂದಿಸದ ಕಾರಣ ಮಂಗಳವಾರ ಕೋಲಾರ ಜಿಪಂ ಸಿಇಒ ಬಳಿ ಪಾದಯಾತ್ರೆ ತೆರಳುವುದಾಗಿ ಸಮಿತಿ ತಿಳಿಸಿ ಮಂಗಳವಾರ ಪಾದಯಾತ್ರೆ ಮೂಲಕ ಕೋಲಾರಕ್ಕೆ ಬರುತ್ತಿದ್ದಾಗ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯಂ ಆಗಮಿಸಿ ಶಿಕ್ಷಕರ ನಿಯೋಜನೆ ರದ್ದುಪಡಿಸಿದ್ದು, ಪ್ರತಿಭಟನೆ ನಿಲ್ಲಿಸಲು ಮನವಿ ಮಾಡಿದರು. ಆದೇಶ ಪತ್ರ ತೋರಿಸಲು ಪ್ರತಿಭಟನಾಕಾರು ಪಟ್ಟು ಹಿಡಿದಾಗ ಬಿಇಒ ಬಂಗಾರಪೇಟೆಗೆ ತೆರಳಿ ಇಲಾಖೆಯ ಆದೇಶ ಪತ್ರ ತಂದು ತೋರಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಜಿಲ್ಲಾ ಸೇನಾ ಜಿಲ್ಲಾಧ್ಯಕ್ಷ ತಿಪ್ಪಸಂದ್ರದ ಶ್ರೀನಿವಾಸ್, ಎಸ್ಡಿಎಂಸಿ ಅಧ್ಯಕ್ಷ ಹರೀಶ್, ವೆಂಕಟೇಶಪ್ಪ, ಗಣೇಶಪ್ಪ, ಮುನಿಯಪ್ಪ, ಚಿನ್ನಯ್ಯ, ಎಸ್ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement