ಅಂಗವಿಕಲ ಮಕ್ಕಳ ಯೋಜನೆ ಸದುಪಯೋಗವಾಗಲಿ
ಮುಳಬಾಗಲು: ಸರ್ವಶಿಕ್ಷಣ ಅಭಿಯಾನದಡಿ ಅಂಗವಿಕಲ ಮಕ್ಕಳಿಗೆ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ನಂಗಲಿ ಸಮೂಹ ಸಂಪನ್ಮೂಲ ವ್ಯಕ್ತಿ ಸುಬ್ರಮಣಿ ಕರೆ ನೀಡಿದರು. ತಾಲೂಕಿನ ಬೈರಕೂರು ಗ್ರಾಮದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂಗವಿಕಲ ಮಕ್ಕಳ ಪೋಷಕರ ಸಭೆಯಲ್ಲಿ ಮಾತನಾಡಿದರು. ಬೈರಕೂರು ಸಂಪನ್ಮೂಲ ವ್ಯಕ್ತಿ ಬಿ.ಎಂ. ರಾಮಚಂದ್ರಪ್ಪ ಮಾತನಾಡಿ, ಅಂಗವಿಕಲರಿಗೆ ಅನುಕಂಪ ತೋರದೆ ಅವಕಾಶ ಕೊಡಲು ಕೋರಿದರು. ಶಿಕ್ಷಕ ಆರ್. ಕುಶಾ ಅಂಗವಿಕಲ ಮಕ್ಕಳ ನೂನ್ಯತೆ ವಿಧ, ಸ್ವರೂಪ ಮತ್ತು ನಿರ್ವಹಣೆ ಕುರಿತು ವಿವರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಹೈದರ್ ಸಾಬ್ ವಹಿಸಿದ್ದರು ಶಿಕ್ಷಕರಾದ ಕೆ.ವಿ. ಪ್ರಕಾಶ್, ಎಂ. ಮುನಿರಾಜು, ಸುಬ್ರಮಣ್ಯರೆಡ್ಡಿ ಮುಂತಾದವರು ಭಾಗವಹಿಸಿದ್ದರು.