ಅಂತರ್ಜಲ ಕುರಿತು ಜಾಗೃತಿ ಶಿಬಿರ
ಮಾಲೂರು: ಪ್ರಕೃತಿಯ ವಿರುದ್ಧವಾಗಿ ನಡೆದ ಮಾನವರ ಚಟುವಟಿಕೆಗಳು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ರಾಮಯ್ಯ ಹೇಳಿದರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಅಂತರ್ಜಲ ಕುರಿತು ಜಾಗೃತಿ ಶಿಬಿರದಲ್ಲಿ ಮಾತನಾಡಿ, ಅಂತರ್ಜಲ ಬಳಕೆ ಎಷ್ಟು ಪ್ರಮುಖವೋ ಅದರ ಮರುಪೂರೈಕೆ ಅಷ್ಟೆ ಪಾಮುಖ್ಯ ವಾಗಬೇಕು. ಅರಣ್ಯ ಸಂಪತ್ತು ಲೂಟಿ, ಹಸಿರು ನಾಶಗಳಿಂದ ಮೇಲ್ಮಣ್ಣು ಕೊಚ್ಚಿ ಹೋಗಿ ಅಂರ್ತಜಲ ಮರುಪೂರಣ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅಂರ್ತಜಲ ಹೆಚ್ಚಿಸಲು ಕೃತಕ ಮರುಪೂರಕ ರಚನೆಗಳನ್ನು ಮಾಡಬೇಕಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿದರು.