ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 2 Feb 2014, 1:20 am

ಕೆಜಿಎಫ್: ನಕಲಿ ಒಡವೆಗಳನ್ನು ಅಸಲಿ ಎಂದು ದೃಢಪಡಿಸಿ ಬ್ಯಾಂಕ್ಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿರುವ ಚಮನ್ಲಾಲ್ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಬಿಎಸ್ಪಿ ಮುಖಂಡ ವಿಲಿಯಂ ರವಿಚಂದ್ರನ್ ನೇತೃತ್ವದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು. ಕೇವಲ ಎರಡು ಮೂರು ಸಾವಿರ ವಸ್ತುಗಳನ್ನು ಕಳವು ಮಾಡಿದ ಕಳ್ಳರನ್ನು ಕೂಡಲೇ ಬಂಧಿಸುವ ಪೊಲೀಸರು ಬ್ಯಾಂಕ್ಗೆ ಲಕ್ಷಾಂತರ ವಂಚೆನೆ ಮಾಡಿ ತಲೆ ಮರೆಸಿಕೊಂಡಿರುವ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮವನ್ನು ಜರುಗಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಜಯಪಾಲ್, ಇಮೇನ್ಯುಯಲ್, ರಾಮು, ರಾಜನ್, ಸಾಮುವೆಲ್, ಜೋವೆಲ್, ವಿಲಿಯಮ್, ಯಸ್ರಾ, ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement