ಆಶ್ರಯ ಮನೆ ಅಪೂರ್ಣಕ್ಕೆ ಪಿಡಿಒ ಹೊಣೆ
ಬಂಗಾರಪೇಟೆ: ಹಣಕಾಸಿನ ಮುಗ್ಗಟ್ಟಿನಿಂದ ನೆನೆಗುದಿಗೆ ಬಿದ್ದಿದ್ದ ಆಶ್ರಯ ಮನೆಗಳನ್ನು ಫೆ.28ರೊಳಗೆ ಪೂರ್ಣಗೊಳಿಸದಿದ್ದರೆ ಎಲ್ಲ ಮನೆಗಳು ಅನರ್ಹಗೊಳ್ಳಲಿದ್ದು, ಇದಕ್ಕೆ ಪಂಚಾಯ್ತಿಗಳ ಪಿಡಿಒಗಳೇ ನೇರ ಹೊಣೆಯಾಗಬೇಕಾದಿತು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು. ಇಲ್ಲಿನ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕ್ಷೇತ್ರದ ವ್ಯಾಪ್ತಿಯ 23ಪಂಚಾಯ್ತಿಗಳ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಅರ್ಧಕ್ಕೆ ನಿಂತಿರುವ ಮನೆಗಳನ್ನು ಫೆ. 28ರ ತನಕ ಕಾಲಾವಕಾಶ ನೀಡಿ ಪೂರ್ಣಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪಿಡಿಒಗಳು ಆಸಕ್ತಿಯಿಂದ ಮುಂದೆ ನಿಂತು ನೆನೆಗುದಿಗೆ ಬಿದ್ದಿರುವ ಮನೆಗಳನ್ನು ಸರ್ಕಾರ ನಿಗದಿಪಡಿಸಿರುವ ಸಮಯದ ಒಳಗೆ ಮುಗಿಸಬೇಕು. ಇಲ್ಲದಿದ್ದರೆ ನೀವೇ ಬಡವರ ಶಾಪಕ್ಕೆ ಕಾರಣರಾಗುವಿರಿ ಎಂದು ಎಚ್ಚರಿಕೆ ನೀಡಿದರು.